ಚಾಂಡಿಮಾಲ್‌ಗೆ ಒಂದು ಪಂದ್ಯ ನಿಷೇಧ: ಸುರಂಗ ಶ್ರೀಲಂಕಾ ನಾಯಕ

Update: 2018-06-23 09:29 GMT

ಕೊಲಂಬೊ, ಜು.23: ಚೆಂಡು ವಿರೂಪ ಪ್ರಕರಣದಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಸೋಲು ಕಂಡಿರುವ ದಿನೇಶ್ ಚಾಂಡಿಮಾಲ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಚಾಂಡಿಮಾಲ್ ಬದಲಿಗೆ ಸುರಂಗ ಲಕ್ಮಲ್ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

‘‘ದಿನೇಶ್ ಚಾಂಡಿಮಾಲ್ ಅನುಪಸ್ಥಿತಿಯಲ್ಲಿ ಲಕ್ಮಲ್‌ರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ’’ ಎಂದು ಶ್ರೀಲಂಕಾ ಕ್ರಿಕೆಟ್ ಪ್ರಕಟನೆಯಲ್ಲಿ ತಿಳಿಸಿದೆ.

ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆಯಲ್ಲಿತ್ತು. ಬಾರ್ಬಡೊಸ್‌ನಲ್ಲಿ ಶನಿವಾರದಿಂದ ಕೆರಿಬಿಯನ್ ನೆಲದಲ್ಲಿ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. 28ರ ಹರೆಯದ ಚಾಂಡಿಮಾಲ್ ಎರಡನೇ ಟೆಸ್ಟ್ ಪಂದ್ಯದ ವೇಳೆ ಚೆಂಡಿಗೆ ತನ್ನ ಬಾಯಿಯಲ್ಲಿರುವ ಸಿಹಿ ವಸ್ತುವಿನ ಲಾಲಾರಸವನ್ನು ಸೇರಿಸಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿದ್ದಾರೆ.

ಐಸಿಸಿ ಚಾಂಡಿಮಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ವಿರುದ್ಧ ಚಾಂಡಿಮಾಲ್ ಸಲ್ಲಿಸಿರುವ ಮೇಲ್ಮನವಿಯನ್ನು ಐಸಿಸಿ ಶುಕ್ರವಾರ ತಿರಸ್ಕರಿಸಿದೆ. ಪಂದ್ಯ ಶುಲ್ಕದಲ್ಲಿ 100 ಶೇ. ದಂಡ ಹಾಗೂ ಎರಡು ಅಮಾನತು ಅಂಕವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News