ತೆಲಂಗಾಣ: ಟ್ರಾಕ್ಟರ್ ಕಾಲುವೆಗೆ ಬಿದ್ದು 15 ಸಾವು

Update: 2018-06-24 16:52 GMT

ಹೈದರಾಬಾದ್, ಜೂ. 24: ತೆಲಂಗಾಣದ ಯಾದ್ರಿ ಜಿಲ್ಲೆಯಲ್ಲಿ ರವಿವಾರ ಟ್ರಾಕ್ಟರ್ ಟ್ರೋಲಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 14 ಮಹಿಳೆಯರು ಹಾಗೂ ಒಂದು ಮಗು ಮೃತಪಟ್ಟಿದೆ. 7 ಮಂದಿ ಗಾಯಗೊಂಡಿದ್ದಾರೆ.

ಎದುರಿನಿಂದ ಬಂದ ದ್ವಿಚಕ್ರ ವಾಹವನ್ನು ತಪ್ಪಿಸುವ ಸಂದರ್ಭ ಟ್ರಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡ. ಇದರಿಂದ ಟ್ರಾಕ್ಟರ್ ಟ್ರೋಲಿ ಲಕ್ಷ್ಮೀಪುರ ಗ್ರಾಮ ಸಮೀಪದ ಮುಸಿ ನದಿಗೆ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಾಕ್ಟರ್‌ನಲ್ಲಿ 20 ಜನರು ಪ್ರಯಾಣಿಸುತ್ತಿದ್ದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಎಸ್. ರಮೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News