ಬರ್ತ್‌ಡೇ ಬಾಯ್ ಮೆಸ್ಸಿಗೆ ವಿಶೇಷ ಗಿಫ್ಟ್

Update: 2018-06-24 09:25 GMT

 ಮಾಸ್ಕೊ, ಜೂ.24: ಅರ್ಜೆಂಟೀನದ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ರವಿವಾರ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೆಸ್ಸಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅವರಷ್ಟೇ ಎತ್ತರದ ಚಾಕಲೇಟ್‌ನಿಂದ ನಿರ್ಮಿಸಲ್ಪಟ್ಟಿರುವ ಪ್ರತಿಮೆಯನ್ನು ರಶ್ಯದ ಅಭಿಮಾನಿಗಳು ಸಿದ್ಧಪಡಿಸಿದ್ದಾರೆ.

ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಈ ವರ್ಷದ ವಿಶ್ವಕಪ್‌ನಲ್ಲಿ ಸ್ಪರ್ಧೆಯಲ್ಲಿರಲು ತೀವ್ರ ಹೋರಾಟ ನಡೆಸಬೇಕಾದ ಸ್ಥಿತಿಯಲ್ಲಿದೆ. ವಿಶ್ವಕಪ್ ವೇಳೆಯೇ ಮೆಸ್ಸಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆಂಬ ವಿಷಯವನ್ನು ಅರಿತ್ತಿದ್ದ ಮಾಸ್ಕೋದ ಮಿಠಾಯಿ ತಯಾರಿಕೆಯ ಐವರು ಕೆಲಸಗಾರರ ತಂಡ ಮೆಸ್ಸಿಯನ್ನೇ ಹೋಲುವ ಚಾಕಲೇಟ್ ಮೂರ್ತಿಯನ್ನು ರಚಿಸಿದ್ದು ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.

ಮಾಸ್ಕೊದಿಂದ 50 ಕಿಮೀ ದೂರದಲ್ಲಿರುವ ಪಟ್ಟಣವೊಂದರಲ್ಲಿ ಮೆಸ್ಸಿ ಚಾಕಲೇಟ್ ಮೂರ್ತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News