ಗುಹೆಯೊಳಗೆ ಸಿಲುಕಿರುವ ಥಾಯ್ಲೆಂಡ್ ನ ಫುಟ್ಬಾಲ್ ಆಟಗಾರರು

Update: 2018-06-25 14:20 GMT

ಬ್ಯಾಂಕಾಕ್,ಜೂ.25 : ಥಾಯ್ಲೆಂಡ್ ನ ಗುಹೆಯೊಂದರೊಳಗಡೆ ಸಿಕ್ಕಿ ಬಿದ್ದಿದ್ದಾರೆನ್ನಲಾದ 12 ಮಂದಿ ಹದಿಹರೆಯದ ಫುಟ್ಬಾಲ್ ಆಟಗಾರರು ಮತ್ತವರ ಕೋಚ್ ಅನ್ನು ಶೋಧಿಸುವ ಕಾರ್ಯಾಚರಣೆ ನಡೆದಿದೆ. ಚಿಯಾಂಗ್ ರೈ ಎಂಬ ಪ್ರದೇಶದ ಈ 13 ಮಂದಿ ಥಾಮ್ ಲುವಾಂಗ್ ನಾಂಗ್ ನಾನ್ ಗುಹೆಯನ್ನು ಇಕ್ಕಟ್ಟಾದ 15 ಮೀಟರ್ ಉದ್ದದ  ಸುರಂಗದ ಮೂಲಕ  ನುಸುಳಿದ್ದಾರೆಂದು ಹೇಳಲಾಗುತ್ತಿದೆ.  ಆದರೆ ಏರಿದ ನೀರಿನ ಮಟ್ಟದಿಂದಾಗಿ ಅವರ ಹಾದಿ ಮುಚ್ಚಿದ್ದು ಅವರು ಗುಹೆಯೊಳಗಡೆ ಬಂಧಿಯಾಗಿದ್ದಾರೆಂದು ಹೇಳಲಾಗಿದೆ.

ರಕ್ಷಣಾ ಕಾರ್ಯಕರ್ತರು ಅವಿರತ ಶ್ರಮ ಪಡುತ್ತಿದ್ದರೂ ಈ ಗುಹೆಗಳು ಕತ್ತಲಕೂಪಗಳಾಗಿರುವುದರಿಂದ ಅಲ್ಲಿ ಶೋಧಿಸುವುದು ಹರಸಾಹಸವಾಗಿದೆ. ಅದರೊಳಗೆ ಆಮ್ಲಜನಕ ಮಟ್ಟವೂ ಕಡಿಮೆಯಾಗಿದ್ದು ಮಳೆ ಕೂಡ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟು ಮಾಡಿದೆ.

ಆಟಗಾರರು ಶನಿವಾರದಿಂದ ನಾಪತ್ತೆಯಾಗಿದ್ದು ಗುಹೆಯ ಪ್ರವೇಶದ್ವಾರದಲ್ಲಿ ಹಲವಾರು ಬೈಸಿಕಲ್ ಗಳಿರುವುದನ್ನು ನೋಡಿ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರು ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News