‘ಮಹಿಳೆಯರ ಬೋಗಿ’ ನಾಮಫಕಲ ಅಳವಡಿಕೆ ಇಲ್ಲ: ಬಿಎಂಆರ್‌ಸಿಎಲ್

Update: 2018-06-25 13:06 GMT

ಬೆಂಗಳೂರು, ಜೂ.25: ನಮ್ಮ ಮೆಟ್ರೊನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿರುವ ಬೋಗಿಗಳಿಗೆ ‘ಮಹಿಳೆಯರ ಬೋಗಿ’ ಎಂಬ ನಾಪಫಲಕ ಅಳವಡಿಸಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ನಮ್ಮ ಮೆಟ್ರೋಗೆ ಆರು ಬೋಗಿಗಳು ಅಳವಡಿಸಿದ್ದರೂ, ಮಹಿಳೆಯರಿಗೆ ಪ್ರತ್ಯೇಕ ಬೋಗಿ ಎನ್ನುವ ನಾಮಫಲಕ ಯಾಕೆ ಅಳವಡಿಸಿಲ್ಲ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಆದರೆ, ನಮ್ಮ ಮೆಟ್ರೋ ಯೂ ಟರ್ನ್ ಪಡೆದುಕೊಂಡು ಚಲಿಸಲು ಸಾಧ್ಯವಿಲ್ಲ. ಹೀಗಾಗಿ, ಯಾವ ದಿಕ್ಕಿನಲ್ಲಿ ಮೆಟ್ರೋ ಚಲಿಸುತ್ತದೆಯೋ ಆ ದಿಕ್ಕಿನ ಮೊದಲ ಬೋಗಿ ಮಹಿಳೆಯರಿಗೆ ಮೀಸಲಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಮಫಲಕಗಳಿದ್ದರೆ ಮಹಿಳೆಯರಿಗೆ ಕೇವಲ ಸುರಕ್ಷತೆ ಮಾತ್ರವಲ್ಲ ಪುರುಷರು ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಲ್ಲದೆ, ನಾಮಫಲಕವಿಲ್ಲದಿದ್ದರೆ ಒಂದೊಮ್ಮೆ ಪುರುಷರು ಬಂದರೂ ಇದು ಮಹಿಳೆಯರಿಗೆ ಮೀಸಲು ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಕೆಲ ಪ್ರಯಾಣಿಕರು ಅಭಿಪ್ರಾಯಿಸಿದ್ದಾರೆ. ಆದರೆ ಮೊದಲ ಬೋಗಿ ಮಹಿಳೆಯರಿಗಾಗಿಯೇ ಮೀಸಲು ಎನ್ನುವುದನ್ನು ನಿಲ್ದಾಣದಲ್ಲಿ ಅನೌನ್ಸ್ಮೆಂಟ್ ಮಾಡಲಾಗುತ್ತದೆ. ಪ್ರತ್ಯೇಕ ಬೋಗಿಯಲ್ಲಿ ಪುರುಷರು ಕಾಣಿಸಿಕೊಂಡರೆ ಸ್ಥಳದಲ್ಲಿಯೇ ದಂಡ ಹಾಕಲಾಗುವುದು ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News