ಕನ್ನಡದಲ್ಲಿಯೇ ಉತ್ತರಿಸಲು ಆರಂಭಿಸಿ

Update: 2018-06-25 18:33 GMT

ಮಾನ್ಯರೇ,

ಕರ್ನಾಟಕದ ಎಲ್ಲಾ ಶಾಸಕರುಗಳಲ್ಲಿ (ವಿಧಾನಸಭಾ ಅಥವಾ ಲೋಕಸಭಾ) ಒಂದು ಮನವಿ. ತಾವೆಲ್ಲ ತಮ್ಮ ಅಧಿಕಾರಾವಧಿಯಲ್ಲಿ ವಿವಿಧ ಪತ್ರಿಕಾ ಮಾಧ್ಯಮಗಳ ಮತ್ತು ಟಿವಿ ವಾಹಿನಿಗಳ ಸಂಗಡ ಮಾತುಕತೆ ನಡೆಸಲೇಬೇಕಾಗುವುದು, ಹೇಳಿಕೆಗಳನ್ನು ನೀಡಬೇಕಾಗುವುದು ಹಾಗೂ ಪ್ರಶ್ನೆಗಳಿಗೆ ಉತ್ತರಿಸಬೇಕಾಗುವುದು. ಅದು ದಿಲ್ಲಿಯಿರಬಹುದು, ಮತ್ಯಾವುದೇ ಪ್ರದೇಶ ಇರಬಹುದು. ಅವರು ಕೇಳಿದ ಪ್ರಶ್ನೆಯು ನಿಮಗೆ ಅರ್ಥವಾದಲ್ಲಿ ಕನ್ನಡದಲ್ಲೇ ಉತ್ತರಿಸಿ. ಅರ್ಥ ಆಗದಿದ್ದಲ್ಲಿ ಅವರು ಕನ್ನಡದಲ್ಲಿಯೇ ಪ್ರಶ್ನೆ ಹಾಕುವವರೆಗೆ ಕಾಯಿರಿ. ನಿಮ್ಮ ಉತ್ತರ/ಹೇಳಿಕೆ ಬೇಕಾಗಿರುವುದು ಸಂದರ್ಶನ ನಡೆಸುತ್ತಿರುವವರಿಗೆ. ನಿಮಗೆ ಅನುಕೂಲವಾದ ನುಡಿಯಲ್ಲಿ ನಿಮ್ಮನ್ನು ಮಾತನಾಡಿಸುವುದು ಅವರ ಕರ್ತವ್ಯ.

Similar News