ಗ್ರಂಥಾಲಯ ಓದುಗರಿಗಾಗಿ

Update: 2018-06-26 18:41 GMT

ಮಾನ್ಯರೇ,
    
ಗ್ರಂಥಾಲಯ, ವಾಚನಾಲಯಗಳು ಆಯಾಯ ಸ್ಥಳದ ಜ್ಞಾನ ವಿಕಾಸ ಕೇಂದ್ರಗಳಾಗಿವೆ. ಆದರೆ ಇಂತಹ ಜಾಗಗಳಲ್ಲೂ ಕೆಲವು ಓದುಗರಿಂದ, ಅನುಚಿತ ವಿಕೃತ ಪ್ರಕ್ರಿಯೆಗಳು ನಡೆಯುವುದು ವಿಷಾದನೀಯ. ಕೆಲವರು ವಾಚನಾಲಯದಲ್ಲಿ ಬಂದು ಕುರ್ಚಿಯಲ್ಲಿಯೇ ಗಾಢ ನಿದ್ದೆಗೆ ಶರಣಾಗಿ ಬೀಡುತ್ತಾರೆ. ಇವರ ಇಂತಹ ವರ್ತನೆಯಿಂದ ಇತರ ಓದುಗರಿಗೆ ಕುಳಿತು ಕೊಳ್ಳಲು, ಆಸನದ ವ್ಯವಸ್ಥೆ ಸಿಗುವುದಿಲ್ಲ. ಮತ್ತೆ ಕೆಲವರು ಪತ್ರಿಕೆಗಳನ್ನು ಓದಿದ ಬಳಿಕ, ಅಚ್ಚು ಕಟ್ಟಾಗಿ ಮೂಲಸ್ಥಿತಿಯಲ್ಲಿ ಇಡದೆ, ಹರಡಿ ದಿಕ್ಕಾಪಾಲು ಮಾಡಿ ಬಿಡುತ್ತಾರೆ. ಕೆಲವರು ತಮಗೆ ಬೇಕಾದ ಪತ್ರಿಕೆಯ ತುಣುಕುಗಳನ್ನು ಕತ್ತರಿಸಿಕೊಂಡು ಹೋಗುತ್ತಾರೆ. ಇದರಿಂದ ಇತರ ಓದುಗರು ಪತ್ರಿಕೆಯ ಪೂರ್ಣ ಓದಿನಿಂದ ವಂಚಿತರಾಗಬೇಕಾಗುತ್ತದೆ. ಮತ್ತೆ ಇನ್ನೂ ಕೆಲವರು ಕಾಲಹರಣ ಮಾಡುತ್ತಾ ಹರಟೆ ಹೊಡೆಯುತ್ತಾರೆ.
ಆದ್ದರಿಂದ ಗ್ರಂಥಾಲಯಗಳಲ್ಲಿ ಇಂತಹ ವಿಕೃತ ಪ್ರಕ್ರಿಯೆಗಳು ನಡೆಯದಂತೆ ಓದುಗ ಮಹಾಶಯರು ಓದುವ ಪ್ರಜ್ಞೆಯನ್ನು ಆರೋಗ್ಯಕರವಾಗಿ ರೂಪಿಸಿ ಕೊಳ್ಳಬೇಕು.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News