ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ಕತರ್ ನಿಲ್ಲಿಸಲಿ: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಯುಎಇ

Update: 2018-06-29 18:20 GMT

 ಹೇಗ್ (ನೆದರ್‌ಲ್ಯಾಂಡ್), ಜೂ. 29: ಭಯೋತ್ಪಾದಕ ಗುಂಪುಗಳು ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ಕತರ್ ನಿಲ್ಲಿಸಬೇಕು ಎಂದು ಗುರುವಾರ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಯುಎಇ ಹೇಳಿದೆ. ಅದೇ ವೇಳೆ, ತಾನು ಕತರ್ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದೇನೆ ಎಂಬ ಆರೋಪಗಳನ್ನೂ ಅದು ನಿರಾಕರಿಸಿದೆ.

‘‘ತನ್ನ ಈ ವರ್ತನೆಯನ್ನು ನಿಲ್ಲಿಸುವಂತೆ ನಮ್ಮ ಸರಕಾರ ಕತರ್‌ಗೆ ಪದೇ ಪದೇ ಹೇಳಿತ್ತು’’ ಎಂದು ನೆದರ್‌ಲ್ಯಾಂಡ್‌ಗೆ ಯುಎಇ ರಾಯಭಾರಿ ಸಯೀದ್ ಅಲ್ನುವೈಸ್ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದಲ್ಲಿ ಹೇಳಿದರು.

ಕತರ್‌ನ ಆರೋಪಗಳು ಆಧಾರರಹಿತ ಎಂದು ಯುಎಇ ಅಭಿಪ್ರಾಯಪಟ್ಟಿದೆ.

‘‘ತನ್ನ ವರ್ತನೆಯನ್ನು ತಿದ್ದಿಕೊಳ್ಳುವುದಾಗಿ ಕತರ್ ಮತ್ತೆ ಮತ್ತೆ ಭರವಸೆ ನೀಡಿದ್ದರೂ, ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಅದು ವಿಫಲವಾಗಿದೆ’’ ಎಂದು ಯುಎಇ ಆರೋಪಿಸಿದೆ.

 2017 ಜೂನ್ 5ರಿಂದ ಕತರ್ ವಿರುದ್ಧ ಯುಎಇ ತೆಗೆದುಕೊಂಡಿರುವ ಕ್ರಮಗಳು ‘ಎಲ್ಲ ರೂಪಗಳಲ್ಲಿ ಇರುವ ಜನಾಂಗೀಯ ತಾರತಮ್ಯವನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ಒಡಂಬಡಿಕೆ’ಗೆ ವಿರುದ್ಧವಾಗಿವೆ ಎಂಬುದಾಗಿ ಕತರ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News