ಮೆಕ್ಸಿಕೊದಿಂದ ಅಕ್ರಮ ಪ್ರವೇಶ: ಭಾರತದ ಮಹಿಳೆ, ವಿಕಲಚೇತನ ಬಾಲಕನನ್ನು ಬೇರ್ಪಡಿಸಿದ ಅಮೆರಿಕ

Update: 2018-06-30 06:07 GMT

ವಾಶಿಂಗ್ಟನ್,ಜೂ.30: ಮೆಕ್ಸಿಕೊದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ ಭಾರತದ ಮಹಿಳೆ ಹಾಗೂ ಆಕೆಯ ಐದು ವರ್ಷದ ವಿಕಲಚೇತನ ಬಾಲಕನನ್ನು ಬಂಧಿಸಿದ ಅಮೆರಿಕದ ಅಧಿಕಾರಿಗಳು ಬಳಿಕ ತಾಯಿ-ಮಗನನ್ನು ಪ್ರತ್ಯೇಕಗೊಳಿಸಿದೆ ಎಂದು ವರದಿಯಾಗಿದೆ.

  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಜಾರಿಗೆ ತಂದಿರುವ ವಿವಾದಾತ್ಮಕ ‘ಶೂನ್ಯ ಸಹಿಷ್ಣುತೆ ನೀತಿ’ಯ ಪ್ರಕಾರ ಅಮೆರಿಕ ಗಡಿಭಾಗದಿಂದ ಅಕ್ರಮವಾಗಿ ಪ್ರವೇಶಿಸುವ ವಲಸಿಗ ಹೆತ್ತವರು ಹಾಗೂ ಮಕ್ಕಳನ್ನು ಬೇರ್ಪಡಿಸಲಾಗುತ್ತದೆ. ಈಗಾಗಲೇ ಸುಮಾರು 2,000ಕ್ಕೂ ಅಧಿಕ ಮಕ್ಕಳನ್ನು ಹೆತ್ತವರು ಹಾಗೂ ರಕ್ಷಕರಿಂದ ಬೇರ್ಪಡಿಸಲಾಗಿದೆ. ಅಮೆರಿಕದ ಈ ಕ್ರಮ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕದಲ್ಲಿ ಆಶ್ರಯ ಬಯಸಿ ಮೆಕ್ಸಿಕೊದಿಂದ ಅಮೆರಿಕದ ಗಡಿ ಪ್ರವೇಶಿಸಿದ ಭಾರತದ ಮಹಿಳೆಯನ್ನು 33ರ ಹರೆಯದ ಭವನ್ ಪಟೇಲ್ ಎಂದು ಗುರುತಿಸಲಾಗಿದೆ. ಪಟೇಲ್‌ಗೆ ಮಂಗಳವಾರ ಅರಿರೆನ ನ್ಯಾಯಾಲಯ 30,000 ಡಾಲರ್ ಬಾಂಡ್‌ನ್ನು ನೀಡಿದೆ. ಆದರೆ, ಪಟೇಲ್ ಅವರು ತನ್ನ ವಿಕಲಚೇತನ 5ರ ಬಾಲಕನನ್ನು ಮತ್ತೆ ಸೇರುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಅಮೆರಿಕದ ಶೂನ್ಯ ಸಹಿಷ್ಣುತೆ ನೀತಿಯನ್ವಯ ಭಾರತದ ಪ್ರಜೆಯನ್ನು ತನ್ನ ಮಕ್ಕಳಿಂದ ಬೇರ್ಪಡಿಸಿರುವುದು ಇತ್ತೀಚೆಗೆ ನಡೆದಿರುವ ಮೊದಲ ಘಟನೆಯಾಗಿದೆ. ಅಕ್ರಮವಾಗಿ ಗಡಿ ಪ್ರವೇಶಿಸುವವರನ್ನು ಬಂಧಿಸಿರುವ ಅಮೆರಿಕದ ಕಾನೂನು ಜಾರಿ ಏಜೆನ್ಸಿಗಳು ಹೆತ್ತವರಿಂದ 2,300 ಕ್ಕೂ ಅಧಿಕ ಮಕ್ಕಳನ್ನು ಬೇರ್ಪಡಿಸಿದ್ದಾರೆ. ಅಮೆರಿಕದ ಈ ಕ್ರಮದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ವ್ಯಕ್ತವಾದ ಕಾರಣ ಇದೀಗ ಈ ನೀತಿಯನ್ನು ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News