ಮೂಲೆಗುಂಪಾಗಿರುವ ಫೆಲೆಸ್ತೀನ್ ಸಂಸತ್ತು

Update: 2018-07-06 16:16 GMT

ಅಬು ದಿಸ್ (ಫೆಲಸ್ತೀನ್), ಜು. ೬: ಭಾರೀ ನಿರೀಕ್ಷೆಗಳೊಂದಿಗೆ ನಿರ್ಮಿಸಲಾಗಿರುವ  ಫೆಲೆಸ್ತೀನಿಯನ್ ಸಂಸತ್ತು ಈಗ ಬಿಕೋ ಎನ್ನುತ್ತಿದೆ. ಬಳಕೆಯಾಗದಿರುವ ಹಾಲ್‌ನಲ್ಲಿ ಪಾರಿವಾಳಗಳು ನೆಲೆಸಿದ್ದು, ಅವುಗಳ ಹಿಕ್ಕೆ ದಪ್ಪ ಪದರವೊಂದನ್ನು ನಿರ್ಮಿಸಿದೆ.

ಫೆಲೆಸ್ತೀನಿಯನ್ ಸ್ವಾಯತ್ತ ಸರಕಾರ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಆಂತರಿಕ ಒಪ್ಪಂದಗಳ ಬಗ್ಗೆ 1996 ರಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನಿಯರ ನಡುವೆ ಮಾತುಕತೆಗಳು ನಡೆಯುತ್ತಿದ್ದಾಗ ಫೆಲೆಸ್ತೀನ್ ಸಂಸತ್ತಿನ ನಿರ್ಮಾಣವನ್ನು ಆರಂಭಿಸಲಾಯಿತು.

ಈ ಒಪ್ಪಂದವು ಅಂತಿಮವಾಗಿ ಸ್ವತಂತ್ರ ಫೆಲೆಸ್ತೀನಿಯನ್ ದೇಶದ ನಿರ್ಮಾಣಕ್ಕೆ ಹಾದಿ ಮಾಡಿಕೊಡುತ್ತದೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿತ್ತು.

ಜೆರುಸಲೇಮ್ ತಮಗೆ ಸೇರಿದ್ದು ಎಂಬುದಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳು ಮುಂದಿಟ್ಟಿರುವ ಬೇಡಿಕೆಗಳಿಗೆ ಅಬು ದಿಸ್ ಗ್ರಾಮ ಉತ್ತಮ ಪರಿಹಾರ ಎಂಬುದಾಗಿ   ಭಾವಿಸಲಾಗಿತ್ತು. ಅದು ಜೆರುಸಲೇಮ್ ನಗರದ ಹೊರವಲಯದಲ್ಲಿದ್ದರೂ, ಫೆಲೆಸ್ತೀನ್ ಪ್ರಾಧಿಕಾರವು ಅದನ್ನು ಜೆರುಸಲೇಮ್ ಜಿಲ್ಲೆಯ ಭಾಗವೆಂಬುದಾಗಿಯೇ ಪರಿಗಣಿಸಿತ್ತು.

ಆದರೆ, 2000 ದಲ್ಲಿ ಅಂತಿಮ ಒಪ್ಪಂದಕ್ಕೆ ಸಂಬಂಧಿಸಿದ ಶಾಂತಿ ಮಾತುಕತೆಗಳು ಮುರಿದುಬಿದ್ದವು ಹಾಗೂ ಫೆಲೆಸ್ತೀನ್ ಬಂಡಾಯ ಆರಂಭಗೊಂಡಿತು. ಜೆರುಸಲೇಮ್ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿತು.

ಫೆಲೆಸ್ತೀನ್ ಸಂಸತ್ತಿನ ನಿರ್ಮಾಣ ಸ್ಥಗಿತಗೊಂಡಿತು ಹಾಗೂ ಕಟ್ಟಡದ ಪಕ್ಕದಲ್ಲಿಯೇ ಇಸ್ರೇಲ್ ‘ಪ್ರತ್ಯೇಕತಾ ಬೇಲಿ’ ನಿರ್ಮಿಸಿತು ಹಾಗೂ ಇದು ಜೆರುಸಲೇಮ್‌ನೊಂದಿಗಿನ ಅದರ ಸಂಪರ್ಕವನ್ನು ಕಡಿಯಿತು.

2006 ರಲ್ಲಿ ಹಮಾಸ್ ಫೆಲೆಸ್ತೀನ್ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ, ಅದು ಗಾಝಾ ಮೇಲಿನ ನಿಯಂತ್ರಣವನ್ನು ಮರುಪಡೆಯಿತು. ಹಾಗಾಗಿ, ಸಂಸತ್ತು ಸಂಪೂರ್ಣವಾಗಿ ಮೂಲೆಗುಂಪಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News