ವಿಂಬಲ್ಡನ್ ಟೂರ್ನಿ: ಡಿವಿಜ್ ಶರಣ್ ಜೀವನಶ್ರೇಷ್ಠ ಸಾಧನೆ

Update: 2018-07-10 09:34 GMT

ಲಂಡನ್, ಜು.10: ಭಾರತದ ಡಬಲ್ಸ್ ಆಟಗಾರ ಡಿವಿಜ್ ಶರಣ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಝಿಲೆಂಡ್‌ನ ಅರ್ಟೆಂ ಸಿಟಾಕ್ ಜೊತೆಗೂಡಿ ಈ ಸಾಧನೆ ಮಾಡಿದ್ದಾರೆ. ಶರಣ್ ಹಾಗೂ ಸಿಟಾಕ್ ಜೋಡಿ ಇಸ್ರೇಲ್-ಪೊಲೆಂಡ್‌ನ ಜೋನಾಥನ್ ಎಲ್ರಿಚ್ ಹಾಗೂ ಮರ್ಸಿನ್ ಮಟ್ಕೊಸ್ಕಿ ಅವರನ್ನು 1-6, 6-7(3), 6-4, 6-4, 6-4 ಸೆಟ್‌ಗಳಿಂದ ಮಣಿಸಿದ್ದಾರೆ.

ಎಡಗೈ ಆಟಗಾರ ಶರಣ್ ಈ ವರ್ಷದ ಆಸ್ಟ್ರೇಲಿಯನ್ ಓಪನ್, 2017ರ ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್‌ನಲ್ಲಿ (2013) ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಶರಣ್ ಹಾಗೂ ಸಿಟಾಕ್ ಸತತ ಟೂರ್ನಿಯಲ್ಲಿ ಎರಡನೇ ಬಾರಿ ಮೊದಲೆರಡು ಸೆಟ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡು 5 ಸೆಟ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದ್ದಾರೆ.

ಶರಣ್ ಹಾಗೂ ಸಿಟಾಕ್ ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಅಮೆರಿಕದ ಜೋಡಿ ಮೈಕ್ ಬ್ರಿಯಾನ್ ಹಾಗೂ ಜಾಕ್ ಸಾಕ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News