ಪಡಿತರ ಅಕ್ಕಿ 7 ಕೆಜಿ ಮುಂದುವರಿಕೆ: ಜು.12 ರಂದು ಕಲಾಪದಲ್ಲಿ ಪ್ರಕಟ ಸಾಧ್ಯತೆ

Update: 2018-07-11 14:26 GMT

ಬೆಂಗಳೂರು, ಜು. 11: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಬಜೆಟ್‌ನಲ್ಲಿ 2 ಕೆಜಿ ಕಡಿತ ಮಾಡಲಾಗಿತ್ತು. ಅದಕ್ಕೆ ಮೈತ್ರಿ ಸರಕಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ 7ಕೆ.ಜಿ.ಗೆ ಏರಿಕೆ ಮಾಡುವ ಬಗ್ಗೆ ನಾಳೆ(ಜು.12) ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸುವ ಸಾಧ್ಯತೆಗಳಿವೆ.

ಅಕ್ಕಿ ಪ್ರಮಾಣ ಕಡಿತ ಮಾಡದಂತೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಶಾಸಕ ಡಾ.ಸುಧಾಕರ್, ಜೆಡಿಎಸ್‌ನ ಹಿರಿಯ ಮುಖಂಡ ಎ.ಟಿ.ರಾಮಸ್ವಾಮಿ ಅಕ್ಕಿ ಪ್ರಮಾಣ ಕಡಿತಕ್ಕೆ ಆಕ್ಷೇಪಿಸಿದ್ದರು.

ನಾಳೆ(ಜು.12) ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಉತ್ತರ ನೀಡಲಿದ್ದು, ಈ ವೇಳೆ ಅಕ್ಕಿ ಪ್ರಮಾಣ ಹೆಚ್ಚಳ, ಸಾಲಮನ್ನಾ ಬಗ್ಗೆ ಸ್ಪಷ್ಟಣೆ ಹಾಗೂ ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆಯೂ ವಿವರಣೆ ನೀಡಲಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News