ಬೆಂಗಳೂರು: ಜೂಜಾಡುತ್ತಿದ್ದ 8 ಮಂದಿಯ ಬಂಧನ
Update: 2018-07-11 20:45 IST
ಬೆಂಗಳೂರು, ಜು.11: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಎಂಟು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ, 73 ಸಾವಿರ ರೂ.ನಗದು ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಚೇತನ್(30), ಬಾಲರಾಜ್(23), ರಾಕೇಶ್(24), ಅಬ್ದುಲ್(22), ರೆಹಮತುಲ್ಲಾ (25) ಸೇರಿ ಎಂಟು ಜನ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸಂದ್ರದ ಆರ್‌ಎಂ 2ನೆ ಹಂತದ ಮನೆಯೊಂದರಲ್ಲಿ ಯುವಕರು ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯನಗರ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.