ಶಂಕರಾಚಾರ್ಯರ ನಡೆ ಮತ್ತು ಕುವೆಂಪು ವಿಷಾದ

Update: 2018-07-11 18:35 GMT

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರಕಾರ 2013ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಟಿಪ್ಪುಸುಲ್ತಾನ್ ಅವರ ಜಯಂತಿಯನ್ನು ಸರಕಾರದ ವತಿಯಿಂದಲೇ ಆಚರಿಸಲು ಪ್ರಾರಂಭ ಮಾಡಿತು. ಆ ಸಂದರ್ಭದಲ್ಲಿ ಕೇಸರಿ ಮತೋನ್ಮಾದಿಗಳು ಟಿಪ್ಪುಸುಲ್ತಾನ್ ಒಬ್ಬ ದೇಶದ್ರೋಹಿ, ಕೊಲೆಗಡುಕ, ಹಿಂದೂ ವಿರೋಧಿ, ಹಾಗಾಗಿ ಆತನ ಜಯಂತಿ ಮಾಡಬಾರದೆಂದು ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದವು. ಕೇಸರಿ ಮತೀಯವಾದಿಗಳು ಹೇಳುವ ಹಾಗೆ ಟಿಪ್ಪುಸುಲ್ತಾನ್ ಯಾವ ದೇಶದ್ರೋಹದ ಕೆಲಸವನ್ನಾಗಲಿ, ಕೊಲೆ, ಸುಲಿಗೆ ಹಾಗೂ ಅನ್ಯಧರ್ಮ ವಿರೋಧ ಇತ್ಯಾದಿಯಾಗಿ ಯಾವೊಂದು ಸಮಾಜ ವಿರೋಧಿ ಕೆಲಸವನ್ನು ಮಾಡಿಲ್ಲ. ಹಾಗೆ ಮಾಡಿರುವುದಕ್ಕೆ ಯಾವುದೇ ಶಾಸನವಾಗಲಿ ಅಥವಾ ಐತಿಹಾಸಿಕ ದಾಖಲೆಗಳಾಗಲಿ ಇಲ್ಲ. ಟಿಪ್ಪು ನಿಜಕ್ಕೂ ಒಬ್ಬ ದೇಶಪ್ರೇಮಿ ಮತ್ತು ಸಮಾಜ ಸುಧಾರಕ. ಈ ಕಾರಣಕ್ಕೆ ಟಿಪ್ಪು ಜಯಂತಿ ಪ್ರಸ್ತುತವಾಗಿತ್ತು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಹೋಗಿ 2018ರಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಮೈತ್ರಿ ಸರಕಾರ ರಚನೆಗೊಂಡು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅವರ ಅಧಿಕಾರದ ಮೊದಲ ಬಜೆಟ್ ಮಂಡನೆಯಲ್ಲಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 25 ಕೋಟಿ ರೂ. ಅನುದಾನ ನೀಡಿದರು. ಅದರ ಜತೆಗೆ ಶಂಕರಾಚಾರ್ಯರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಘೋಷಣೆ ಮಾಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆವಶ್ಯಕವಾಗಿತ್ತು. ಎಲ್ಲಾ ಬ್ರಾಹ್ಮಣರು ಶ್ರೀಮಂತರಲ್ಲ, ಅಲ್ಲಿಯೂ ಬಡವರಿದ್ದಾರೆ. ಈ ಕಾರಣಕ್ಕೆ ಮಂಡಳಿ ಸ್ಥಾಪಿಸಿ ಅನುದಾನ ಕೊಡುವುದು ಸಾಮಾಜಿಕ ಕಳಕಳಿಯ ಒಂದು ಭಾಗ. ಆದರೆ ಶಂಕರಾಚಾರ್ಯರ ಜಯಂತಿ ಅನಿವಾರ್ಯವಿತೇ? ಈ ಜಯಂತಿಯು ಕೂಡ ಸಾಕಷ್ಟು ಪರ-ವಿರೋಧ ಚರ್ಚೆಗೆ ಗುರಿಯಾಗಿದೆ. ಆದರೂ ಜೀವ ವಿರೋಧಿಯೊಬ್ಬರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವ ಯಾವ ಅಗತ್ಯವೂ ಇರಲಿಲ್ಲ. ಶಂಕರಾಚಾರ್ಯರನ್ನು ಇಂದಿಗೂ ಅವರೊಬ್ಬ ಬ್ರಹ್ಮಜ್ಞಾನ ಪಡೆದವರು, ತತ್ವಜ್ಞಾನಿ, ಅದ್ವೈತ ಜ್ಞಾನಿ ಹೀಗೆ ಹತ್ತು ಹಲವು ಬಿರುದು-ಬಾವಲಿಗಳನ್ನು ಕೊಟ್ಟುಕೊಂಡಿದ್ದಾರೆ.

ವಾಸ್ತವವಾಗಿ ಶಂಕರರು ಭಾರತದಲ್ಲಿನ ಅಸಮಾನತೆಯನ್ನು ಗಟ್ಟಿಗೊಳಿಸಿದ ಒಬ್ಬ ಬಲಾಢ್ಯ ಜಾತಿವಾದಿ. ಬೌದ್ಧ ಧರ್ಮ ಮತ್ತು ಅದರ ಮಾನವೀಯ ಗುಣಗಳ ತಾತ್ವಿಕ ನೆಲೆಗಟ್ಟು ಉತ್ತುಂಗ ಶಿಖರದಲ್ಲಿ ಇದ್ದಾಗ ಗುಪ್ತರು ಅಧಿಕಾರಕ್ಕೆ ಬಂದು ಅದರ ಪ್ರಾಬಲ್ಯವನ್ನು ಹತ್ತಿಕ್ಕಿದರು. ಅನಂತರ ಬೌದ್ಧ ಧರ್ಮವನ್ನು ಹತ್ತಿಕ್ಕುವುದರೊಂದಿಗೆ ಮನುಧರ್ಮಶಾಸ್ತ್ರ ಹಾಗೂ ಭಾರತದ ಜಾತಿವ್ಯವಸ್ಥೆಯನ್ನು ಮತ್ತಷ್ಟು ಪ್ರಬಲವಾಗುವಂತೆ ಮಾಡಿದರು. ಕೆಲವರು ಶಂಕರಾಚಾರ್ಯರ ಕುರಿತು ಅತಾರ್ಕಿಕವಾದ ಮಾಡುತ್ತಿದ್ದಾರೆ. ಶಂಕರಾಚಾರ್ಯರು ಅಂತಹ ವ್ಯಕ್ತಿಯಲ್ಲ, ಅವರು ಬೋಧಿಸಿದ್ದು ಅಧ್ಯಾತ್ಮವನ್ನು ಎಂದು ಸಮಜಾಯಿಸಿ ನೀಡುತ್ತಿದ್ದಾರೆ. ಅವರನ್ನೆಲ್ಲಾ ನಾನು ಕೇಳುವ ಪ್ರಶ್ನೆ ಎಂದರೆ ಆಚಾರ್ಯರು ಅವರ ಬ್ರಹ್ಮಸೂತ್ರ ಭಾಷ್ಯದಲ್ಲಿ ‘‘ಶೂದ್ರರಿಗೆ ವಿದ್ಯೆ ಕೊಡಬಾರದು. ಅವರು ವೇದಗಳನ್ನು ಓದಿದರೆ ಅವರ ನಾಲಿಗೆ ಸೀಳಬೇಕು. ಕಂಠಸ್ಥವಾಗಿದ್ದರೆ ಅವರ ದೇಹವನ್ನು ಕತ್ತರಿಸಿ ಹಾಕಬೇಕು’’ ಎಂದು ಬರೆದುಕೊಂಡಿದ್ದಾರಲ್ಲ ಇದು ನಿಮ್ಮ ದೃಷ್ಟಿಯಲ್ಲಿ ಅಧ್ಯಾತ್ಮವೇ? ಅಥವಾ ಬ್ರಹ್ಮಜ್ಞಾನವೇ? ಶಂಕರಾಚಾರ್ಯರು ಬರುವ ಮುನ್ನ ಶೂದ್ರರಿಗೆ ವೇದಾಧ್ಯಯನ ಮಾಡಲು ಅವಕಾಶವಿತ್ತು. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲಿ ವರ್ಣಭೇದ ಇಲ್ಲದೆ, ಲಿಂಗಭೇದವಿಲ್ಲದೆ ವೇದಾಧ್ಯಯನಕ್ಕೆ ಅಧಿಕಾರವಿದೆ ಎಂದು ಹೇಳಿದರೆ, ಆದಿ ಶಂಕರರು ತಮ್ಮ ಭಾಷ್ಯದಲ್ಲಿ ಶೂದ್ರರಿಗೆ ವೇದಾಧ್ಯಯನಕ್ಕೆ ಅಧಿಕಾರವಿಲ್ಲ ಎಂದು ಹೇಳುತ್ತಾರೆ. ಇದು ಬ್ರಾಹ್ಮಣವಾದವಲ್ಲದೆ, ಜನಪರವಾದವಾಗಲು ಹೇಗೆ ಸಾಧ್ಯ?

ಶಂಕರರ ಜಯಂತಿ ಆಚರಣೆ ಒಂದೆಡೆಯಾದರೆ, ಶಂಕರಾಚಾರ್ಯರಿಗೆ ಜ್ಞಾನವನ್ನು ಹೃದ್ಗತ ಮಾಡಿಸಿದ್ದು ಅಸ್ಪಶ್ಯ ಚಂಡಾಲ ಎಂದು ಕೆಲವು ಬುದ್ಧಿಜೀವಿ ಎನಿಸಿಕೊಂಡವರು ಸಮರ್ಥನೆಗೆ ನಿಂತಿದ್ದಾರೆ. ಶಂಕರಾಚಾರ್ಯರ ಎದುರಿಗೆ ಚಂಡಾಲನೊಬ್ಬ ಬಂದಾಗ ತನಗೆ ಮೈಲಿಗೆ ಆಗುತ್ತದೆಂದು ದೂರ ಹೋಗು ಓಡಿ ಹೋಗು ಎಂದು ಅಬ್ಬರಿಸಿದ್ದು ಇದೇ ಆಚಾರ್ಯರು. ಅಸ್ಪಶ್ಯತೆಯನ್ನು ಆಚರಿಸಿದ್ದು ದೊಡ್ಡ ಸುದ್ದಿಯಾಗಿ ಶಂಕರಾಚಾರ್ಯರ ಹೆಸರಿಗೆ ಕಳಂಕ ಬರುತ್ತದೆ. ಇದನ್ನು ತೊಡೆಯಲು ಶಂಕರರ ಭಕ್ತರು, ‘‘ಆಚಾರ್ಯರಿಗೆ ಅದ್ವೈತ ಸಾಕ್ಷಾತ್ಕಾರವಾಗಿದೆಯೋ? ಅಥವಾ ಇಲ್ಲವೋ? ಎಂದು ತಿಳಿಯಲು ಸಾಕ್ಷಾತ್ ಶಿವನೇ ಪಂಚಮ ವೇಷದಲ್ಲಿ ಬಂದು ಪರೀಕ್ಷಿಸಿದ್ದಾನೆ’’ ಎಂದು ಅವೈಜ್ಞಾನಿಕವಾಗಿ ಶಂಕರ ವಿಜಯ ಕೃತಿಯನ್ನು ರಚಿಸಿದರು ಎಂದು ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಸ್ತಕದಲ್ಲಿ ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಅವರು ದಾಖಲೆ ಸಮೇತ ವಿವರಿಸುತ್ತಾರೆ.

ವಿವೇಕಾನಂದರು ಭಾರತದ ದೊಡ್ಡ ಆಧ್ಯಾತ್ಮಿಕ ಚಿಂತಕ. ಅಸ್ಪಶ್ಯತೆ ಮತ್ತು ಭಾರತದಲ್ಲಿನ ಹಲವು ತಾರತಮ್ಯಗಳ ವಿರುದ್ಧ ಮಾತನಾಡಿದವರು. ಸ್ವತಃ ವಿವೇಕಾನಂದರು ಶಂಕರಾಚಾರ್ಯರ ವಿಚಾರಧಾರೆಗಳನ್ನು ಒಪ್ಪಿಕೊಂಡಿದ್ದರು ಎಂಬುದು ಕೆಲವರ ನಿರಾಧಾರ ವಾದವಾಗಿದೆ. ಆದರೆ ವಿವೇಕಾನಂದರು ಶಂಕರರನ್ನು ಬುದ್ಧಿವಂತರಾಗಿದ್ದರು ಎಂಬುದನ್ನಷ್ಟೇ ಹೇಳುತ್ತಾರೆ ವಿನಃ ಅವರ ವಿಚಾರಧಾರೆಗಳಿಗೆ ವಿರುದ್ಧವಾಗಿಯೇ ಇದ್ದಾರೆ. ಶಂಕರಾಚಾರ್ಯರು ಉತ್ತಮ ಪಾಂಡಿತ್ಯ ಉಳ್ಳವರು, ಆದರೆ ಅವರಲ್ಲಿ ಬ್ರಾಹ್ಮಣತ್ವವಿತ್ತು, ನಾನು ಬ್ರಾಹ್ಮಣ ಎನ್ನುವ ಹೆಮ್ಮೆಯೂ ಇತ್ತು. ಬ್ರಾಹ್ಮಣೇತರರಿಗೆ ಬ್ರಹ್ಮಜ್ಞಾನ ಸಿದ್ಧಿಸುವುದಿಲ್ಲ ಎಂದು ವೇದಾಂತ ಸೂತ್ರಗಳ ಭಾಷ್ಯದಲ್ಲಿ ಬರೆದುಕೊಂಡಿರುವುದರ ಬಗ್ಗೆ ವಿವೇಕಾನಂದರಿಗೆ ಶಂಕರರ ವಿಚಾರಧಾರೆಗಳ ಬಗ್ಗೆ ತಕರಾರುಗಳಿದ್ದವು. ವೇದಾಧ್ಯಯನ ನಡೆಸಲು ಎಲ್ಲರಿಗೂ ಹಕ್ಕುಂಟು ಎಂದು ವೇದಗಳೇ ಹೇಳುತ್ತವೆ. ಹೀಗಿರುವಾಗ ಶೂದ್ರರಿಗೆ ವೇದಾಧ್ಯಯನ ಮಾಡಲು ಅವಕಾಶವಿಲ್ಲ ಎಂದು ಹೇಳುವ ಶಂಕರಾಚಾರ್ಯರ ವಾದವನ್ನು ವಿವೇಕಾನಂದರು ನಯವಾಗಿಯೇ ನಿರಾಕರಿಸಿದ್ದಾರೆ. ಎಲ್ಲರೂ ಅಂದುಕೊಂಡಂತೆ ಶಂಕರಾಚಾರ್ಯರು ಕೇವಲ ಅಸಮಾನತೆಯನ್ನು ಎತ್ತಿ ಹಿಡಿದ ಅದ್ವೈತ ಪ್ರತಿಪಾದಕರಷ್ಟೇ ಅಲ್ಲ. ಬೌದ್ಧ ಧರ್ಮವನ್ನು ನಾಶಮಾಡಿದವರು, ಬೌದ್ಧಬಿಕ್ಕುಗಳ ಮಾರಣಹೋಮಕ್ಕೆ ಕಾರಣರಾದವರು.

ಶಂಕರಾಚಾರ್ಯರ ಕಾಲಘಟ್ಟದಲ್ಲಿ ದಕ್ಷಿಣದಲ್ಲಿ ಪಲ್ಲವರು, ಪಶ್ಚಿಮದಲ್ಲಿ ಚಾಲುಕ್ಯರು ಅಧಿಕಾರ ನಡೆಸುತ್ತಿದ್ದರು. ಅವರು ಕೂಡ ಬ್ರಾಹ್ಮಣತ್ವವನ್ನು ಪೋಷಿಸುತ್ತಿದ್ದ ಕಾರಣ, ಬೌದ್ಧರನ್ನು ಹತ್ತಿಕ್ಕಲು ಶಂಕರರಿಗೆ ಎಲ್ಲಾ ರೀತಿಯ ನೆರವನ್ನು ನೀಡಿದ್ದರು. ಬುದ್ಧಧಮ್ಮದ ಗಟ್ಟಿನೆಲೆಯಾಗಿದ್ದ ನಾಗಾರ್ಜುನಕೊಂಡವನ್ನು ಅಸಂಖ್ಯಾತ ಅನುಯಾಯಿಗಳೊಂದಿಗೆ ನಾಶಮಾಡಿದರು. ಅಸಂಖ್ಯಾತ ಬೌದ್ಧಬಿಕ್ಕುಗಳ ಮಾರಣಹೋಮಕ್ಕೆ ಕಾರಣರಾದರು. ಭಾರತದಲ್ಲಿ ಅಂದು ಜನಪರವಾಗಿದ್ದ ಬೌದ್ಧಧರ್ಮವನ್ನು ಸದ್ದಿಲ್ಲದ ರೀತಿ ಮಾಡಲು ಕಾರಣರಾದರು. ಇಂತಹ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಮೂಲಕ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಸಾರುವ ಸಂದೇಶವೇನು? ಶಂಕರಾಚಾರ್ಯರ ಈ ಜೀವ ವಿರೋಧಿ ಕೃತ್ಯವನ್ನು ಜನರು ಅಳವಡಿಸಿಕೊಂಡರೆ ಪ್ರಜಾಪ್ರಭುತ್ವದ ನೆಲೆ ಏನಾಗಬಹುದು ಎಂಬುದನ್ನು ಮುಖ್ಯಮಂತ್ರಿಗಳು ಒಮ್ಮೆ ಯೋಚಿಸಬೇಕಿದೆ. ಶಂಕರಾಚಾರ್ಯರ ವಾದವನ್ನು ವಿವೇಕಾನಂದರ ಆದಿಯಾಗಿ ಬಹುತೇಕ ವಿದ್ವಾಂಸರು ಒಪ್ಪಿಲ್ಲ. ಹಾಗೆಯೇ ಕರ್ನಾಟಕದ ಹೆಸರಾಂತ ಚಿಂತಕರಾದ ಕನ್ನಡದ ಪ್ರಜ್ಞೆ ಕುವೆಂಪು ಅವರು ಕೂಡ ಸಮ್ಮತಿಸಿಲ್ಲ.

ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಶಂಕರಾಚಾರ್ಯರ ಹೆಸರನ್ನು ಉಲ್ಲೇಖಿಸಿದ್ದಾರೆ. ಅದನ್ನು ಬರೆದಾಗ ಅವರಿಗೆ ಇನ್ನೂ ವಯಸ್ಸು ಕಿರಿದಿತ್ತು. ತದನಂತರ ಅದು ಕನ್ನಡ ಪುಸ್ತಕದಲ್ಲಿ ನಾಡಗೀತೆಯಾಗಿ ಸೇರ್ಪಡೆಯಾಯಿತು. ಆದರೆ ಕುವೆಂಪು ಅವರು ತಮ್ಮ 80ನೇ ವಯಸ್ಸಿನಲ್ಲಿ ಶಂಕರಾಚಾರ್ಯರ ನಿಲುವನ್ನು ವಿರೋಧಿಸಿದ್ದಾರೆ. ಕೆ.ಎಸ್.ಭಗವಾನ್ ಅವರು ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಪುಸ್ತಕ ಬರೆದಾಗ ಅದನ್ನು ಮೊದಲು ಕುವೆಂಪು ಅವರಿಗೆ ಕೊಟ್ಟು ಓದಿಸಿದರು. ಅದನ್ನು ಓದಿದ ಕುವೆಂಪು ‘‘ಶೂದ್ರರಿಗೆ ವಿದ್ಯೆ ಇಲ್ಲ ಎನ್ನುವುದಕ್ಕೆ ಇವರ್ಯಾರು?’’ ಎಂದು ಸ್ವತಃ ಪಶ್ಚಾತ್ತಾಪ ಪಟ್ಟುಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಖ್ಯಾತ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ‘‘ಶಂಕರಾಚಾರ್ಯರ ಬಗ್ಗೆ ತಿಳಿಯಲು ನಿಮ್ಮ ವರೆವಿಗೂ ಕಾಯಬೇಕಾಯಿತು’’ ಎಂದು ಭಗವಾನ್ ಅವರಿಗೆ ಹೇಳಿದ್ದಾರೆ.

ಕುವೆಂಪು ಅವರು ಕರ್ನಾಟಕದ ವೈಚಾರಿಕ ಚಿಂತಕರು. ಹಿಂದೂ ಧರ್ಮದಲ್ಲಿನ ಅಸಮಾನತೆಯನ್ನು ನೋಡಿಯೇ ಅವರು ಬಂಡಾಯವೆದ್ದವರು. ಜತೆಗೆ ಶೂದ್ರರು ಹಿಂದೂಗಳಲ್ಲ ಎಂಬ ಅರಿವು ಕೂಡ ಅವರಲ್ಲಿತ್ತು. ಒಮ್ಮೆ ಕುವೆಂಪು ಅವರು ‘‘ನಾನು ಹಿಂದೂ ಅಲ್ಲ; ನಾನು ಹಿಂದೂ ಧರ್ಮವನ್ನು ಬಹಳ ಹಿಂದೆಯೆ ಬಿಟ್ಟುಬಿಟ್ಟೆ’’ ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅಂದು ಕೆಲ ಮೂಲಭೂತವಾದಿ ಬ್ರಾಹ್ಮಣರು ಕುವೆಂಪು ದೇಶಬಿಟ್ಟು ಹೋಗಬೇಕು ಎಂದು ಹೌಹಾರಿದ್ದರು. ಕುವೆಂಪು ಅವರನ್ನೇ ದೇಶಬಿಟ್ಟು ತೊಲಗಿ ಎಂದವರು ಸಾಮಾನ್ಯರನ್ನು ಬಿಡುವರೇ? ನಾಡಪ್ರಜ್ಞೆ ಕುವೆಂಪು ಅವರು ಬದುಕಿದ್ದ ಘಟ್ಟದಲ್ಲಿಯೇ ಶಂಕರಾಚಾರ್ಯರ ವಾದವನ್ನು ನಿರಾಕರಿಸಿದ್ದಾರೆ. ಸ್ವತಃ ಕುವೆಂಪು ಅವರೇ ಅಂತಿಮದಲ್ಲಿ ನಿರಾಕರಿಸಿದ ಶಂಕರಾಚಾರ್ಯರು ಕರ್ನಾಟಕದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗೆ ಏಕೆ ಬೇಕಾದರು? ಶಂಕರಾಚಾರ್ಯರ ವಾದವನ್ನು ವಿವೇಕಾನಂದರ ಆದಿಯಾಗಿ ಬಹುತೇಕ ವಿದ್ವಾಂಸರು ಒಪ್ಪಿಲ್ಲ.

ಹಾಗೆಯೇ ಕರ್ನಾಟಕದ ಹೆಸರಾಂತ ಚಿಂತಕರಾದ ಕನ್ನಡದ ಪ್ರಜ್ಞೆ ಕುವೆಂಪು ಅವರು ಕೂಡ ಸಮ್ಮತಿಸಿಲ್ಲ. ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಶಂಕರಾಚಾರ್ಯರ ಹೆಸರನ್ನು ಉಲ್ಲೇಖಿಸಿದ್ದಾರೆ. ಅದನ್ನು ಬರೆದಾಗ ಅವರಿಗೆ ಇನ್ನೂ ವಯಸ್ಸು ಕಿರಿದಿತ್ತು. ತದನಂತರ ಅದು ಕನ್ನಡ ಪುಸ್ತಕದಲ್ಲಿ ನಾಡಗೀತೆಯಾಗಿ ಸೇರ್ಪಡೆಯಾಯಿತು. ಆದರೆ ಕುವೆಂಪು ಅವರು ತಮ್ಮ 80ನೇ ವಯಸ್ಸಿನಲ್ಲಿ ಶಂಕರಾಚಾರ್ಯರ ನಿಲುವನ್ನು ವಿರೋಧಿಸಿದ್ದಾರೆ. ಕೆ.ಎಸ್.ಭಗವಾನ್ ಅವರು ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಪುಸ್ತಕ ಬರೆದಾಗ ಅದನ್ನು ಮೊದಲು ಕುವೆಂಪು ಅವರಿಗೆ ಕೊಟ್ಟು ಓದಿಸಿದರು. ಅದನ್ನು ಓದಿದ ಕುವೆಂಪು ‘‘ಶೂದ್ರರಿಗೆ ವಿದ್ಯೆ ಇಲ್ಲ ಎನ್ನುವುದಕ್ಕೆ ಇವರ್ಯಾರು?’’ ಎಂದು ಸ್ವತಃ ಪಶ್ಚಾತ್ತಾಪ ಪಟ್ಟುಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಖ್ಯಾತ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ‘‘ಶಂಕರಾಚಾರ್ಯರ ಬಗ್ಗೆ ತಿಳಿಯಲು ನಿಮ್ಮ ವರೆವಿಗೂ ಕಾಯಬೇಕಾಯಿತು’’ ಎಂದು ಭಗವಾನ್ ಅವರಿಗೆ ಹೇಳಿದ್ದಾರೆ.

ಕುವೆಂಪು ಅವರು ಕರ್ನಾಟಕದ ವೈಚಾರಿಕ ಚಿಂತಕರು. ಹಿಂದೂ ಧರ್ಮದಲ್ಲಿನ ಅಸಮಾನತೆಯನ್ನು ನೋಡಿಯೇ ಅವರು ಬಂಡಾಯವೆದ್ದವರು. ಜತೆಗೆ ಶೂದ್ರರು ಹಿಂದೂಗಳಲ್ಲ ಎಂಬ ಅರಿವು ಕೂಡ ಅವರಲ್ಲಿತ್ತು. ಒಮ್ಮೆ ಕುವೆಂಪು ಅವರು ‘‘ನಾನು ಹಿಂದೂ ಅಲ್ಲ; ನಾನು ಹಿಂದೂ ಧರ್ಮವನ್ನು ಬಹಳ ಹಿಂದೆಯೆ ಬಿಟ್ಟುಬಿಟ್ಟೆ’’ ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅಂದು ಕೆಲ ಮೂಲಭೂತವಾದಿ ಬ್ರಾಹ್ಮಣರು ಕುವೆಂಪು ದೇಶಬಿಟ್ಟು ಹೋಗಬೇಕು ಎಂದು ಹೌಹಾರಿದ್ದರು. ಕುವೆಂಪು ಅವರನ್ನೇ ದೇಶಬಿಟ್ಟು ತೊಲಗಿ ಎಂದವರು ಸಾಮಾನ್ಯರನ್ನು ಬಿಡುವರೇ? ನಾಡಪ್ರಜ್ಞೆ ಕುವೆಂಪು ಅವರು ಬದುಕಿದ್ದ ಘಟ್ಟದಲ್ಲಿಯೇ ಶಂಕರಾಚಾರ್ಯರ ವಾದವನ್ನು ನಿರಾಕರಿಸಿದ್ದಾರೆ. ಸ್ವತಃ ಕುವೆಂಪು ಅವರೇ ಅಂತಿಮದಲ್ಲಿ ನಿರಾಕರಿಸಿದ ಶಂಕರಾಚಾರ್ಯರು ಕರ್ನಾಟಕದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗೆ ಏಕೆ ಬೇಕಾದರು?

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News