×
Ad

ವಿಧಾನಸೌಧವನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಿ: ಪರಿಷತ್‌ ಸದಸ್ಯ ಗೋವಿಂದರಾಜು

Update: 2018-07-12 21:53 IST

ಬೆಂಗಳೂರು, ಜು.12: ನವೀಕರಣದ ಹೆಸರಲ್ಲಿ ವಿಧಾನಸೌಧದ ಕೊಠಡಿಗಳನ್ನು ಒಡೆಯುವುದನ್ನು ನಿಲ್ಲಿಸಬೇಕಿದ್ದರೆ, ಅದನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸುವ ಅಗತ್ಯವಿದೆ ಎಂದು ಪರಿಷತ್‌ನ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಸದನದಲ್ಲಿ ಪ್ರಸ್ತಾಪ ಮಂಡಿಸಿದ್ದಾರೆ. ಅವರ ಪ್ರಸ್ತಾಪಕ್ಕೆ ಸದನದಲ್ಲಿ ಬೆಂಬಲವೂ ವ್ಯಕ್ತವಾಗಿದೆ.

ಗೋವಿಂದರಾಜು ಅವರ ಪ್ರಸ್ತಾಪಕ್ಕೆ ಪರಿಷತ್ ಸಭಾಪತಿ ಹೊರಟ್ಟಿ ಅವರೂ ಬೆಂಬಲ ಸೂಚಿಸಿದರು. ವಿಧಾನಸೌಧದ ಕಟ್ಟಡದ ಘನತೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ವಿಧಾನಸೌಧವನ್ನು ಪಾರಂಪರಿಕ ಕಟ್ಟಡ ಎಂದು ಘೋಷಣೆ ಮಾಡುವುದು ಅವಶ್ಯಕವಾಗಿದೆ. ಸದನದ ಸದಸ್ಯರು ಒಪ್ಪಿಕೊಂಡರೆ ಈ ಬಗ್ಗೆ ಒಮ್ಮತದ ನಿರ್ಧಾರ ತಗೆದುಕೊಳ್ಳಬಹುದು ಎಂದು ಹೊರಟ್ಟಿ ಹೇಳಿದರು. ಸಭಾಪತಿ ಹೊರಟ್ಟಿ ಮಾತಿಗೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕೆಂಗಲ್ ಹನುಮಂತಯ್ಯ ದೂರಾಲೋಚನೆ: ಕೆಂಗಲ್ ಹನುಮಂತಯ್ಯನವರು ರಾಜ್ಯ ವಿಧಾನಸಭೆಗೆ ಕಟ್ಟಡವೊಂದನ್ನು ನಿರ್ಮಿಸುವಾಗ ವಾಸ್ತುಶಿಲ್ಪ ವಿಚಾರದಲ್ಲಿ ಅತ್ಯಂತ ಎಚ್ಚರ ವಹಿಸಿದ್ದರು. ಈ ಕಟ್ಟಡ ಮುಂದೊಂದು ದಿನ ಐತಿಹಾಸಿಕ, ಪಾರಂಪರಿಕ ಕಟ್ಟಡವಾಗಬಹುದು ಎಂಬ ಮುನ್ನೋಟ ಅವರಿಗಿದ್ದಿರಬಹುದು. ಈ ಕಾರಣಕ್ಕೇ ನಿರ್ಮಾಣ ಹಂತದಲ್ಲಿ ಅವರು ಆ ಮಟ್ಟಿಗಿನ ಅಸ್ತೆ ವಹಿಸಿದ್ದಿರಬಹುದು. ಅದರಂತೆ, ದ್ರಾವಿಡ ಮತ್ತು ಇಂಡೋ ವಾಸ್ತು ಶಿಲ್ಪದಲ್ಲಿ ವಿಧಾನಸೌಧವನ್ನು ನಿರ್ಮಿಸಿದ್ದರು. ಹೀಗಾಗಿ ಇಂದು ವಿಧಾನಸೌಧವನ್ನು ಕಂಡೊಡನೆ ಸಾವಿರಾರು ವರ್ಷಗಳ ಹಿನ್ನೆಲೆ ಇರುವ ಪಾರಂಪರಿಕ ಕಟ್ಟಡವೇನೋ ಎಂದು ಭಾಸವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News