×
Ad

ಮೂವರು ಕಳ್ಳರ ಬಂಧನ: 12.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 59 ಮೊಬೈಲ್ ವಶ

Update: 2018-07-13 20:15 IST

ಬೆಂಗಳೂರು, ಜು.13: ನಗರದ ವಿವಿಧೆಡೆ ಚಿನ್ನಾಭರಣ ಹಾಗೂ ಮೊಬೈಲ್ ಕಳವು ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆಯ ಪೊಲೀಸರು ಬಂಧಿಸಿ 12.50 ಲಕ್ಷ ರೂ.ಚಿನ್ನಾಭರಣ ಹಾಗೂ 59 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆಜೆಆರ್ ನಗರದ ಇಬ್ರಾಹಿಂ ಪಾಷಾ(28), ಬನಶಂಕರಿ ಮೂರನೆ ಹಂತದ ದೇವರಾಂ(40) ಹಾಗೂ ತೆಲಂಗಾಣದ ಎಂ.ಡಿ.ಇಬ್ರಾಹಿಂ(33) ಬಂಧಿತ ಆರೋಪಿಗಳು. ನಗರದ ಚಂದ್ರಲೇಔಟ್ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆಗೆ ನಿಯೋಜಿಸಲಾಗಿತ್ತು.

ಈ ತಂಡವು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬಂಧಿಸಿ, 12.50ಲಕ್ಷ ರೂ.ಬೆಲೆಬಾಳುವ 75ಗ್ರಾಂ ಚಿನ್ನಾಭರಣ, 15ಕೆಜಿ ಬೆಳ್ಳಿ ಸಾಮಗ್ರಿಗಳು, 59 ವಿವಿಧ ಕಂಪೆನಿಯ ಮೊಬೈಲ್, ತಂಬಾಕು ಪ್ಯಾಕೆಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದ ಮೂಲಕ ಚಂದ್ರಾಲೇಔಟ್ ಠಾಣೆಯ ನಾಲ್ಕು ಚಿನ್ನಾಭರಣ ಕಳವು ಪ್ರಕರಣ, ಒಂದು ಮನೆಗಳವು ಪತ್ತೆಯಾಗಿದೆ. ಆರೋಪಿ ದೇವರಾಂ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ಎರಡು ಸರ ಅಪಹರಣ ಪ್ರಕರಣಗಳು, ಹನುಮಂತನಗರ ಠಾಣೆಯಲ್ಲಿ ಚಿನ್ನಾಭರಣ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಇಬ್ರಾಹಿಂ ವಿರುದ್ಧ ಅಶೋಕನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಚಂದ್ರಲೇಔಟ್ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News