ಸರಕಾರಿ ಶಾಲೆಗಳನ್ನು ಕಾಪಾಡುವವರು ಯಾರು..?

Update: 2018-07-13 18:30 GMT

ಮಾನ್ಯರೇ,

 ರಾಜ್ಯದಲ್ಲಿರುವ ಸರಕಾರಿ ಶಾಲಾ-ಕಾಲೇಜುಗಳನ್ನು ಆಧುನೀಕರಣಗೊಳಿಸಬೇಕಾದ ಅನಿವಾರ್ಯ ಇದೆ. ಈ ಮೂಲಕ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಮಾದರಿಯಾಗಿ ತೋರಿಸಬೇಕಾದ ಜರೂರತ್ತು ಕೂಡಾ ಇದೆ. ಆದರೆ ಇದರ ಮಧ್ಯೆ ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲೆಗಳ ದುರಸ್ತಿಗೆ ಹಣ ಇಲ್ಲ ಎಂಬ ವಿಚಾರ ಪ್ರಶ್ನಾರ್ಹ.

ರಾಜ್ಯದ 5,588 ಪ್ರಾಥಮಿಕ ಶಾಲೆಗಳ 10,258 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆೆ. ಅಲ್ಲದೆ 264 ಪ್ರೌಢಶಾಲೆಗಳ 949 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆೆ. ಇದನ್ನು ದುರಸ್ತಿ ಮಾಡುವುದಕ್ಕೆ ಹಣದ ಕೊರತೆ ಇದೆ ಎಂದು ಸ್ವತಃ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಚಿವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಹಲವು ಕೋಟಿ ರೂ. ಬೇಕಾಗುತ್ತದೆ. ಆದರೆ ರಾಜ್ಯ ಸರಕಾರದಿಂದ ಸಿಗುವ ಅನುದಾನದಿಂದ ದುರಸ್ತಿ ಮಾಡಲು ಈಗ ಸಾಧ್ಯವಿಲ್ಲವಾದರೆ ಸರಕಾರಿ ಶಾಲಾ ಕಾಲೇಜುಗಳನ್ನು ಶಿಥಿಲಾವಸ್ಥೆಯಿಂದ ಪಾರು ಮಾಡುವುದು ಯಾರು? ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕಟ್ಟಡಗಳಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ..? ಈ ವಿಚಾರದ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಯೋಚಿಸಿ ಕೂಡಲೇ ಅನುದಾನ ಬಿಡುಗಡೆ ಮಾಡಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News