"ನನ್ನನ್ನು ಸುಟ್ಟು ಅದರ ಮೇಲೆ ಮರ ಬೆಳೆಸಿ"

Update: 2018-07-15 14:36 GMT

ಲೋವಾ (ಅಮೆರಿಕ), ಜು.15: ಈ ತಿಂಗಳ ಆರರಂದು ಮೃತಪಟ್ಟ ಈ ಐದು ವರ್ಷದ ಪೋರ ಇದೀಗ ಇಡೀ ಅಮೆರಿಕದಲ್ಲಿ ಸುದ್ದಿಯಾಗಿದ್ದಾನೆ. ತೀರಾ ವಿರಳ ಎನಿಸಿದ ಮೂಳೆ ಹಾಗೂ ಕಪಾಲದ ನರದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಗ್ಯಾರೆಟ್ ಮಥಿಯಾಸ್ ತನ್ನ ಶ್ರದ್ಧಾಂಜಲಿಯನ್ನು ತಾನೇ ಬರೆದಿದ್ದ. ಯಾತನಾಮಯ ಚಿಕಿತ್ಸೆ ಬಗ್ಗೆಯೂ ಬಾಲಕ ವಿವರಿಸಿದ್ದಾನೆ. ಇದರಲ್ಲಿ ಬದುಕು ಮತ್ತು ಸಾವಿನ ಬಗೆಗಿನ ಅಂಶಗಳು ಎಲ್ಲರ ಗಮನ ಸೆಳೆದಿವೆ.

ಬಾಲಕನ ಶ್ರದ್ಧಾಂಜಲಿಯಲ್ಲಿ ಆತನ ಇಷ್ಟದ ಅಂಶಗಳು: ಸಹೋದರಿಯ ಜತೆ ಆಡುವುದು, ಬ್ಲೂ ಬನ್ನಿ, ಟ್ರ್ಯಾಶ್ ಮೆಟಲ್ ಮ್ಯೂಸಿಕ್ ಎಂದಿದ್ದರೆ, ಇಷ್ಟವಲ್ಲದ ಪಟ್ಟಿಯಲ್ಲಿ ಪ್ಯಾಂಟ್ ಮತ್ತು ಡರ್ಟಿ ಸ್ಟುಪಿಡ್ ಕ್ಯಾನ್ಸರ್ ಸೇರಿದೆ. ಜತೆಗೆ ಕೆಟ್ಟ ವಾಸನೆ ಬರುವ ಮಂಗನ ಮೂಗು.

ಇವೆಲ್ಲವನ್ನೂ ಪೋಷಕರಾದ ಎಮ್ಮಿಲಿ ಮತ್ತ ರ್ಯಾನ್ ಮಾಟ್ಟಿಸ್ ಕ್ರೋಢೀಕರಿಸಿದ್ದಾರೆ. ಬಾಲಕನ ಆಯುಷ್ಯದ ಕೊನೆಯ ತಿಂಗಳು ಎಂದು ವೈದ್ಯರು ಹೇಳಿದ ಬಳಿಕ ವಯಸ್ಕರ ವಿಷಯಗಳಾದ ಅಂತ್ಯಸಂಸ್ಕಾರ ಮತ್ತು ಮಣ್ಣು ಮಾಡುವುದು ಮತ್ತಿತರ ವಿಷಯಗಳ ಬಗ್ಗೆಯೂ ಬಾಲಕನ ಅಭಿಪ್ರಾಯ ಪಡೆದಿದ್ದಾರೆ. ಈ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗಿದೆ ಎಂದು ತಾಯಿ ಹೇಳಿದ್ದಾರೆ.

ಸಾವಿನ ಬಗ್ಗೆ ಕೇಳಿದ ಪ್ರಶ್ನೆಗೆ, "ಗೋರಿಲ್ಲಾ ಆಗುವುದು ಹಾಗೂ ಅಪ್ಪನತ್ತ ಪೂ ಎಸೆಯುವುದು!" ಎಂದು ಪ್ರತಿಕ್ರಿಯಿಸಿದ್ದಾನೆ. ಆತನನ್ನು ಹೂಳಬೇಕೇ ಅಥವಾ ಸುಡಬೇಕೇ ಎಂದು ಕೇಳಿದಾಗ, "ಸುಡಬೇಕು ಹಾಗೂ ಮರ ಬೆಳೆಸಬೇಕು. ನಾನು ಗೊರಿಲ್ಲಾ ಆಗಿ ಅದರಲ್ಲಿ ವಾಸಿಸಬಹುದು" ಎಂದು ಹೇಳಿದ್ದಾನೆ. ಅಂತ್ಯಸಂಸ್ಕಾರದ ವಿಧಿವಿಧಾನಗಳ ಬಗ್ಗೆಯೂ ಸ್ಪಷ್ಟವಾಗಿ ಹೇಳಿದ ಬಾಲಕ, "ಅಂತ್ಯಸಂಸ್ಕಾರ ತೀರಾ ಬೇಸರದಾಯಕ" "ನನಗೆ ಐದು ವರ್ಷವಾದ್ದರಿಂದ ಐದು ಬೌನ್ಸಿ ಹೌಸ್, ಸೈನಿಕ ಹಾಗೂ ಹಿಮದ ಗೋಪುರ ಬೇಕು" ಎಂದು ಹೇಳಿದ್ದಾನೆ.

ಆತನ ಕೊನೆಯ ಸಂದೇಶವಾದ, "ಸೀ ಯಾ ಲೇಟರ್, ಸಕ್ಸಸ್!- ದ ಗ್ರೇಟ್ ಗ್ರಾರೆಟ್ ಅಂಡರ್‍ಪ್ಯಾಂಟ್ಸ್" ವಾಕ್ಯದೊಂದಿಗೆ ಮುಗಿಸಲಾಗಿದೆ. ಕೊನೆಯ ಆಸೆಗಳನ್ನು ಈಡೇರಿಸುವ ವಿಧಿವಿಧಾನಗಳು ಶನಿವಾರ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News