ಸ್ಪೇನ್ ಗ್ರಾನ್‌ಪ್ರಿ ಕುಸ್ತಿ: ವಿನೇಶ್ ಪೋಗಟ್‌ಗೆ ಚಿನ್ನ

Update: 2018-07-15 15:43 GMT

ಮ್ಯಾಡ್ರಿಡ್, ಜು.15: ಸ್ಪೇನ್ ಗ್ರಾನ್‌ಪ್ರಿ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿತಾರೆ ವಿನೇಶ್ ಪೋಗಟ್ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ತನ್ನ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡರು.

24ರ ಹರೆಯದ ವಿನೇಶ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ತೂಕ ವಿಭಾಗದ ಫೈನಲ್ ಸುತ್ತಿನಲ್ಲಿ ಕೆನಡಾದ ನಟಾಶಾ ಫೋಕ್ಸ್ ವಿರುದ್ಧ 10-0 ಅಂತರದಿಂದ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಅರ್ಹತಾ ಸುತ್ತಿನಲ್ಲಿ ಮೆಕ್ಸಿಕೊದ ಮರಿಯನಾ ಡಿಯಾಝ್ ವಿರುದ್ಧ 10-0 ಅಂತರದಿಂದ ಜಯಶಾಲಿಯಾಗುವುದರೊಂದಿಗೆ ಟೂರ್ನಿಯಲ್ಲಿ ವಿನೇಶ್ ತನ್ನ ಅಭಿಯಾನ ಆರಂಭಿಸಿದ್ದರು.

ಆಗಸ್ಟ್ 8 ರಿಂದ ಇಂಡೋನೇಶ್ಯಾದಲ್ಲಿ ಆರಂಭವಾಗಲಿರುವ ಏಶ್ಯನ್ ಗೇಮ್ಸ್‌ಗಿಂತ ಮೊದಲು ವಿನೇಶ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News