ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮಹಿಳೆಯರ ಕಾಯಂ ಸಮಸ್ಯೆಯಾಗಿಯೇ ಉಳಿದಿದೆ:ಎನ್‌ಸಿಡಬ್ಲ್ಯು

Update: 2018-07-15 17:33 GMT

 ಹೊಸದಿಲ್ಲಿ,ಜು.14: ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮಹಿಳೆಯರ ಪಾಲಿಗೆ ಕಾಯಂ ಸಮಸ್ಯೆಯಾಗಿ ಉಳಿದುಕೊಂಡಿದೆ. ವಿಶೇಷವಾಗಿ,ಹೆಚ್ಚಿನ ಮಹಿಳೆಯರು ತಮಗಾಗುತ್ತಿರುವ ಕಿರುಕುಳಗಳ ಬಗ್ಗೆ ಹೇಳಿಕೊಳ್ಳದ ಮನೋರಂಜನೆ ಉದ್ಯಮದಲ್ಲಿ ಇದು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೇಳಿದರು.

ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯು ಆಯೋಜಿಸಿದ್ದ ‘ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು,ಹಾಲಿವುಡ್‌ನಲ್ಲಿ ‘#ಮೀ ಟೂ’ ಅಭಿಯಾನ ಆರಂಭಗೊಂಡಾಗಿನಿಂದ ಮನೋರಂಜನೆ ಉದ್ಯಮದಲ್ಲಿಯ ಲೈಂಗಿಕ ಕಿರುಕುಳಗಳು ಹೆಚ್ಚಿನ ಗಮನವನ್ನು ಪಡೆದುಕೊಂಡಿವೆ ಎಂದರು.

  ಮನೋರಂಜನಾ ಉದ್ಯಮವು ಪುರುಷ ಪ್ರಾಧಾನ್ಯ ಕ್ಷೇತ್ರವಾಗಿದ್ದು,ಅಲ್ಲಿ ಸದಾ ಲೈಂಗಿಕ ಕಿರುಕುಳದ ಹೆಚ್ಚಿನ ಅಪಾಯವಿದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದ ಅವರು,ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮಹಿಳೆಯರ ಪಾಲಿಗೆ ಕಾಯಂ ಸಮಸ್ಯೆಯಾಗಿ ಮುಂದುವರಿದಿದೆ. ಉದ್ಯಮದಲ್ಲಿ ಹೆಚ್ಚಿನ ಮಹಿಳೆಯರು ತಾವು ಅನುಭವಿಸುತ್ತಿರುವ ಇಂತಹ ಕಿರುಕುಳಗಳ ಬಗ್ಗೆ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಈ ಪಿಡುಗಿನ ವಿರುದ್ಧ ಹೋರಾಟ ಕಷ್ಟಕರವಾಗಿದೆ ಎಂದರು.

‘ವಿಮೆನ್ ಇನ್ ಕಲೆಕ್ಟಿವ್’ ಮತ್ತು ದಕ್ಷಿಣ ಭಾರತದ ಸಿನಿರಂಗದಲ್ಲಿಯ ಮಹಿಳಾ ವೃತ್ತಿಪರರನ್ನು ಪ್ರತಿನಿಧಿಸಿದ್ದ ಮಲಯಾಳಂ ನಟಿ ರಂಜಿನಿ ಶಷಾ ಅವರು, ಚಿತ್ರರಂಗದಲ್ಲಿ ಆಂತರಿಕ ದೂರುಗಳ ಸಮಿತಿಗಳನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News