ಯುಎಇ: ಮರುಭೂಮಿಯನ್ನು ಕೃಷಿಭೂಮಿಯಾಗಿಸಲು ಯೋಜನೆ

Update: 2018-07-15 17:45 GMT

ದುಬೈ, ಜು. 15: ಆಹಾರ ಭದ್ರತೆಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿರುವ ಯುಎಇ, ವಿಪರೀತ ಹವಾಮಾನ, ನೀರಿನ ಕೊರತೆ ಮತ್ತು ಮಣ್ಣಿನ ಉಪ್ಪಿನಂಶವನ್ನು ನಿಭಾಯಿಸುವ ಹಾಗೂ ಕನಿಷ್ಠ ನೀರಿನಲ್ಲಿ ಬೆಳೆಯುವ ಸ್ಥಳೀಯ ಬೆಳೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಇದಕ್ಕಾಗಿ ಅದು ನೂತನ ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ತೊಡಗಿದೆ.

ಯುಎಇ ತನ್ನ ಆಹಾರದ 80 ಶೇಕಡದಷ್ಟನ್ನು ಈಗ ಆಮದು ಮಾಡಿಕೊಳ್ಳುತ್ತಿದೆ. ಮುಂದಿನ 33 ವರ್ಷಗಳಲ್ಲಿ 60 ಶೇಕಡ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯುವ ಯೋಜನೆಯನ್ನು ಅದು ಹಾಕಿಕೊಂಡಿದೆ.

 ಇದನ್ನು ಸಾಧಿಸುವ ನಿಟ್ಟಿನಲ್ಲಿ ದೇಶ ಜಾಗತಿಕ ಭಾಗೀದಾರಿಕೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ವಾರ, ಅಲ್ ಐನ್ ಮರುಭೂಮಿಯ ವಿವಿಧ ಭಾಗಗಳಲ್ಲಿ ಮರುಭೂಮಿಯಲ್ಲಿ ಮಣ್ಣು ಸೃಷ್ಟಿಸುವ ತಂತ್ರಜ್ಞಾನಗಳನ್ನು ಅಳವಡಿಸುವುದಕ್ಕಾಗಿ ಮಾವರಿದ್ ಹೋಲ್ಡಿಂಗ್ಸ್ ಚೀನಾದ ಚಾಂಗ್‌ಕಿಂಗ್ ಅರ್ತ್‌ಸ್ಕಿನ್ ಎಕೊ-ಟೆಕ್ನಾಲಜಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಒಪ್ಪಂದದ ಪ್ರಕಾರ, ಮೊದಲ ವರ್ಷ 10 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹುಲ್ಲು, ಮರಗಳು ಅಥವ ತರಕಾರಿಗಳನ್ನು ನೆಡಲು ಸ್ಥಳಗಳ ಪರೀಕ್ಷೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News