ಅಬುಧಾಬಿ: ಹೆತ್ತವರ ವಾಹನ ಚಾಲನೆ; 342 ಅಪ್ರಾಪ್ತ ವಯಸ್ಕರ ಬಂಧನ

Update: 2018-07-15 18:14 GMT

ಅಬುಧಾಬಿ, ಜು. 15: 2018ರ ಮೊದಲ ಆರು ತಿಂಗಳ ಅವಧಿಯಲ್ಲಿ, ತಮ್ಮ ಹೆತ್ತವರ ವಾಹನಗಳನ್ನು ಚಾಲನಾ ಪರವಾನಿಗೆಯಿಲ್ಲದೆ ಚಲಾಯಿಸಿದ ಅಪರಾಧಕ್ಕಾಗಿ ಅಬುಧಾಬಿಯಲ್ಲಿ 342 ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ.

ಈ ಅವಧಿಯಲ್ಲಿ ಅಪ್ರಾಪ್ತ ವಯಸ್ಕರು 17 ಸಾರಿಗೆ ಅಪಘಾತಗಳನ್ನು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆತ್ತವರ ನಿರ್ಲಕ್ಷವೇ ಇಂಥ ಅಪಘಾತಗಳಿಗೆ ಕಾರಣ ಎಂದು ಕೇಂದ್ರೀಯ ಕಾರ್ಯಾಚರಣೆಗಳ ನಿರ್ದೇಶನಾಲಯದ ನಿರ್ದೇಶಕ ಬ್ರಿಗೇಡಿಯರ್ ಖಲೀಫ ಅಲ್ ಖೈಲಿ ಹೇಳಿದರು.

ಹೆಚ್ಚಿನ ಪ್ರಕರಣಗಳಲ್ಲಿ ಯಾವುದೇ ವಿಧದ ಸುರಕ್ಷಾ ಉಪಕರಣಗಳಿಲ್ಲದೆ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ್ದಾರೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News