ಶಿಕ್ಷಣವೆಂಬುದು ಮಾರಾಟದ ವಸ್ತುವೇ?

Update: 2018-07-15 18:31 GMT

ಮಾನ್ಯರೇ,

ಏನಾಗುತ್ತಿದೆ ಶಿಕ್ಷಣ ಪದ್ಧತಿ? ಶಾಲಾ ಕಾಲೇಜುಗಳು ಜ್ಞಾನದ ಕೇಂದ್ರಗಳೇ ಅಥವಾ ವ್ಯಾಪಾರದ ಕೇಂದ್ರಗಳೇ? ಹೈ.ಕ. ಭಾಗದ ಶಾಲಾ ಶುಲ್ಕದ ಬಗ್ಗೆೆ ಸ್ಟಿಂಗ್ ಆಪರೇಷನ್‌ನ ಮೂಲಕ ಬಯಲಿಗೆ ಬಂದ ವಿಷಯವಿದು. ಶಾಲೆಯ ನೋಟಿಸ್ ಬೋರ್ಡ್‌ನ ಮೇಲೆ ಶುಲ್ಕ10 ಸಾವಿರ ರೂ. ಇದ್ದರೆ, ಆಡಳಿತ ಕಚೇರಿಯ ಒಳಗೆ ಅದರ ದರ 25-35 ಸಾವಿರ ರೂ. ಆಗಿರುತ್ತದೆ. ಯಾಕೆ ಇಷ್ಟು ಶುಲ್ಕ, ಕಡಿಮೆ ಇಲ್ಲವಾ ಎಂದು ಕೇಳಿದರೆ ‘‘ನಿಮಗೆ ಸೀಟ್ ಬೇಕೊ, ಬ್ಯಾಡವೋ’’ ಎಂದು ಒಂದೇ ಮಾತಿನಲ್ಲಿ ಡೀಲ್ ಮುಗಿಸುತ್ತಿರುವ ವ್ಯವಹಾರದ ದಂಧೆೆ ನಡೆಸುತ್ತಿರುವುದು ಕಂಡುಬಂದಿದೆ. ಇದು ನಿಜಕ್ಕೂ ಶೋಚನೀಯ ಸಂಗತಿ.

 ಈ ಡೊನೇಷನ್ ಹಾವಳಿಗೆ ಕೊನೆ ಹೇಳುವುದೆಂದು? ಈ ಬಕಾಸುರರಿಗೆ ಕಡಿವಾಣ ಹಾಕದಿದ್ದರೆ, ಶಿಕ್ಷಣ ಮಾರಾಟದ ವಸ್ತುವಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಸಂತೆಗೆ ಹೋಗಿ ಖರೀದಿಸುವ ದುಃಸ್ಥಿತಿ ಜನರಿಗೆ ಬರದಂತೆ ಹಣ ಎಂದರೆ ಬಾಯಿ ತೆರೆಯುವ ರಾಕ್ಷಸರ ಬಾಯಿ ಮುಚ್ಚಿಸುವ ಕಾರ್ಯ ಆದಷ್ಟು ಬೇಗನೆ ಕಾರ್ಯಗತಗೊಳ್ಳಬೇಕು. ಕಾನೂನಿನ ನಿಯಮಗಳನ್ನೇ ಉಲ್ಲಂಘನೆ ಮಾಡುವ ಈ ನೀಚ ಸುಲಿಗೆದಾರರಿಗೆ ಕಾನೂನಿನ ರುಚಿ ತೋರಿಸಿ ಶಿಕ್ಷಣವೆಂಬುದು ಮಾರಾಟದ ವಸ್ತುವಾಗದಂತೆ ನೋಡಿಕೊಳ್ಳುವುದು ಅತಿ ಅವಶ್ಯ.

Writer - ವೀರೇಶ್ ಗಂಗಾವತಿ

contributor

Editor - ವೀರೇಶ್ ಗಂಗಾವತಿ

contributor

Similar News