ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ; 9 ಪೊಲೀಸರ ಸಾವು

Update: 2018-07-16 08:52 GMT

ಕಾಬೂಲ್, ಜು.16: ಇಲ್ಲಿನ ಘಾನಿ ಕಾಹಿಲ್ ಜಿಲ್ಲೆ ಪೊಲೀಸ್ ಚೆಕ್ ಪೋಸ್ಟ್ ಮೇಲೆ ರವಿವಾರ ತಡರಾತ್ರಿ ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ  7 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.

ಇದೇ ವೇಳೆ ಪೊಲೀಸರು 5 ಮಂದಿ ಉಗ್ರರನ್ನು ಕೊಂದು ಹಾಕಿದ್ದಾರೆ ಎಂದು ನಂಗರ್ಹಾರ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರಾದ ಗುಲಾಮ್ ಸನಾಯಿ ಸ್ಟ್ಯಾನಿಕ್ಝಾಯ್ ತಿಳಿಸಿದ್ದಾರೆ.

ನಂಗರ್ಹಾರ್ ನಲ್ಲಿ ಸರಕಾರಿ ಪಡೆ ವೈಮಾನಿಕ ದಾಳಿಯಲ್ಲಿ 20 ಮಂದಿ ಉಗ್ರರನ್ನು ಕೊಲ್ಲಲಾಗಿದೆ.  

ನಿನ್ನೆ ಕಾಬೂಲ್ ನ ಸಚಿವಾಲಯದ  ಹೊರಗಡೆ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಮಂದಿ ಮೃತಪಟ್ಟು 15 ಮಂದಿ ನಾಗರಿಕರು  ಗಾಯಗೊಂಡಿದ್ದರು.

ಕಳೆದ ತಿಂಗಳು ಸಚಿವಾಲಯದ ಕಟ್ಟಡದ ಬಳಿ ಆತ್ಮಾಹುತಿ ಬಾಂಬ್ ದಾಳಿಗೆ 12 ಮಂದಿ ಮೃತಪಟ್ಟು 31 ಗಾಯಗೊಂಡಿದ್ದರು. ಮೃತಪಟ್ಟವರಲ್ಲಿ ಬಹುತೇಕ ಮಂದಿ ಸರಕಾರಿ ಅಧಿಕಾರಿಗಳೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News