ಗ್ರೇಟರ್ ನೊಯ್ಡಾದಲ್ಲಿ 2 ಕಟ್ಟಡಗಳು ಕುಸಿತ; 3 ಸಾವು

Update: 2018-07-18 04:35 GMT

ಹೊಸದಿಲ್ಲಿ,ಜು.18: ಗ್ರೇಟರ್ ನೊಯ್ಡಾದ ಶಾಹ್ ಬೆರಿ ಗ್ರಾಮದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳು ಮಂಗಳವಾರ ರಾತ್ರಿ ಕುಸಿದುಬಿದ್ದ ಪರಿಣಾಮವಾಗಿ  ಮೂವರು ಮೃತಪಟ್ಟಿರುವ ಘಟನೆ  ವರದಿಯಾಗಿದೆ. 

ಸ್ಥಳಕ್ಕೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (ಎನ್'ಡಿಆರ್'ಎಫ್) ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, . ಕಾರ್ಯಾಚರಣೆ ವೇಳೆ . ಕಟ್ಟಡದ  ಅವಶೇಷಗಳಡಿ ಸಿಲುಕಿ ಮೃತಪಟ್ಟ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.

ಕಟ್ಟಡ ಕುಸಿತ ಸಂದರ್ಭದಲ್ಲಿ 12ಕ್ಕೂ ಅಧಿಕ ಕಾರ್ಮಿಕರು ಕಟ್ಟಡದಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಅವರೆಲ್ಲ ಕಟ್ಟಡದಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News