ಗೂಗಲ್ ನಲ್ಲಿ 'ಈಡಿಯಟ್' ಎಂದು ಬರೆದು ಹುಡುಕಿದರೆ ಕಾಣುವ ಚಿತ್ರ ಯಾರದ್ದು ಗೊತ್ತಾ?

Update: 2018-07-20 11:22 GMT

ಸ್ಯಾನ್ ಫ್ರಾನ್ಸಿಸ್ಕೋ, ಜು.20: ಗೂಗಲ್ ನಲ್ಲಿ `ಈಡಿಯಟ್' ಪದ ಬರೆದು ಸರ್ಚ್ ಬಟನ್ ಒತ್ತಿದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿತ್ರಗಳು ಕಾಣಿಸುತ್ತಿವೆ. ಕೆಲ ಆನ್ ಲೈನ್ ಹೋರಾಟಗಾರರ ಟ್ರಂಪ್ ವಿರುದ್ಧದ ಅಭಿಯಾನವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಕೆಲ ರೆಡ್ಡಿಟ್ ಬಳಕೆದಾರರು 'ಈಡಿಯಟ್' ಪದದೊಂದಿಗೆ ಇದ್ದ ಟ್ರಂಪ್ ಫೋಟೋಗೆ ವೋಟ್ ಮಾಡಿದ್ದೇ ಈ ಟ್ರೆಂಡ್ ಬೆಳೆಯಲು ಕಾರಣವಾಗಿದೆ. ಟ್ರಂಪ್ ಅವರ ಚಿತ್ರಗಳಿಗೆ ಈಡಿಯಟ್ ಪದದೊಂದಿಗೆ ನಂಟು ಕಲ್ಪಿಸುವ ಈ ಆನ್ ಲೈನ್ ಪ್ರತಿಭಟನೆಯನ್ನು ಟ್ರಂಪ್ ನೀತಿಗಳನ್ನು ವಿರೋಧಿಸುತ್ತಿರುವ ಕೆಲ ಜನರು ನಡೆಸುತ್ತಿದ್ದಾರೆ.

ಗೂಗಲ್ ಸರ್ಚ್ ನಮಗೆ ಹಲವು ರೀತಿಯಲ್ಲಿ ಉಪಕಾರಿ, ಅಂತೆಯೇ ಅದು ಕೆಲವೊಮ್ಮೆ ಈ ರೀತಿಯಲ್ಲಿ ಅಪಕಾರಿಯೂ ಆಗಬಹುದಲ್ಲವೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News