ಮೊಬೈಲ್‌ನಲ್ಲಿ ಯುವತಿಯ ಫೋಟೋ ಕ್ಲಿಕ್ಕಿಸಿದ ಆರೋಪ: ಭದ್ರತಾ ಸಿಬ್ಬಂದಿ ಸೆರೆ
Update: 2018-07-20 19:18 IST
ಬೆಂಗಳೂರು, ಜು.20: ಮೊಬೈಲ್‌ನಲ್ಲಿ ಯುವತಿಯೊಬ್ಬಳ ಚಿತ್ರ ತೆಗೆದ ಆರೋಪದಡಿ ಭದ್ರತಾ ಸಿಬ್ಬಂದಿಯೊಬ್ಬನನ್ನು ಇಲ್ಲಿನ ಬಾಗಲಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ರಾಮಚಂದ್ರ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬಂದಿದ್ದ ಯುವತಿಯನ್ನು ಕಂಡು ಆರೋಪಿ ಮೊಬೈಲ್ ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಮೊಬೈಲ್ ನ ಫ್ಲ್ಯಾಶ್ ಕಂಡು ಯುವತಿ ಆರೋಪಿ ಬಳಿ ತೆರಳಿ, ಮೊಬೈಲ್ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾಳೆ. ಇದರಿಂದ ರಾಮಚಂದ್ರ ಗಾಬರಿಗೊಂಡು ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.