ಅಮೆರಿಕದಲ್ಲಿ ಬೃಹತ್ ಕಾಲ್‍ ಸೆಂಟರ್ ವಂಚನೆ ಪ್ರಕರಣ: ಭಾರತ ಮೂಲದ 21 ಮಂದಿಗೆ ಶಿಕ್ಷೆ

Update: 2018-07-21 09:57 GMT

ನ್ಯೂಯಾರ್ಕ್, ಜು.21: ಬಹುಡಾಲರ್ ಕಾಲ್‍ ಸೆಂಟರ್ ವಂಚನೆ ಪ್ರಕರಣದಲ್ಲಿ ಭಾರತ ಮೂಲದ 21 ಮಂದಿಗೆ ಶಿಕ್ಷೆಯಾಗಿದೆ. ಅಮೆರಿಕ ನಾಗರಿಕರಿಗೆ ಲಕ್ಷಾಂತರ ಡಾಲರ್ ವಂಚಿಸಿದ ಪ್ರಕರಣ ಇದಾಗಿದ್ದು, 4 ರಿಂದ 20 ವರ್ಷಗಳವರೆಗೆ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಇವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂಧು ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ದುರ್ಬಲ ವರ್ಗದವರನ್ನು ಗುರಿ ಮಾಡಿದ ಬಹುದೊಡ್ಡ ವಂಚನೆ ಜಾಲದ ವಿರುದ್ಧ ನಡೆಸಿದ ನಿರಂತರ ಹೋರಾಟಕ್ಕೆ ಜಯ ಸಂದಿದೆ ಎಂದು ಅವರು ವಿವರಿಸಿದ್ದಾರೆ.

ಸುಳ್ಳು, ಬೆದರಿಕೆ ಮತ್ತು ಹಣಕಾಸು ಯೋಜನೆಗಳ ಮೂಲಕ ಹಲವು ಮಂದಿಯ ಜೀವಿತಾವಧಿ ಉಳಿತಾಯವನ್ನು ವಂಚಿಸಲಾಗಿದೆ. ಇಂಥ ಜಾಲವನ್ನು ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಇದಕ್ಕೆ ಕಾರಣರಾದವರನ್ನು ಜೈಲಿಗೆ ಅಟ್ಟಲಾಗಿದೆ. ಈ ಮೂಲಕ ಸಂತ್ರಸ್ತರಿಗೆ ನ್ಯಾಯ ಸಿಕ್ಕಿದೆ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News