ಚಿನ್ನ ಗಳಿಸುವ ಗುರಿಯಲ್ಲಿ ಭಾರತದ ಹಿಜಾಬ್ ಧಾರಿ ಕ್ರೀಡಾಪಟು ಮಜಿಝಿಯಾ ಬಾನು

Update: 2018-07-21 11:23 GMT

ತಿರುವನಂತಪುರಂ, ಜು.21: "ನಾನೋರ್ವ ಸಾಮಾನ್ಯ ಮುಸ್ಲಿಮ್ ಮಹಿಳೆ. ಹಿಜಾಬ್ ನನ್ನ ಪ್ರತಿನಿತ್ಯದ ಉಡುಗೆಯ ಭಾಗವಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಹಿಜಾಬ್ ಧರಿಸುವುದರಿಂದ ನನಗ್ಯಾವ ಸಮಸ್ಯೆಯೂ ಎದುರಾಗಿಲ್ಲ. ಹಿಜಾಬ್ ಧರಿಸುವುದನ್ನು ಯಾವ ಕ್ರೀಡಾ ಅಸೋಸಿಯೇಶನ್ ಗಳೂ ಬೇಡ ಎಂದಿಲ್ಲ" ಎನ್ನುತ್ತಾರೆ 24 ವರ್ಷದ ಮಜಿಝಿಯಾ ಬಾನು ಹೇಳುತ್ತಾರೆ.

ಹಿಜಾಬ್ ಧಾರಿಯಾಗಿ ಬಾಡಿ ಬಿಲ್ಡಿಂಗ್, ಆರ್ಮ್ ರೆಸ್ಲಿಂಗ್ ಹಾಗು ಪವರ್ ಲಿಫ್ಟಿಂಗ್ ನಲ್ಲಿ ಚಾಂಪಿಯನ್ ಆಗಿರುವ ಮಜಿಝಿಯಾ ಬಾನು ವಿಶ್ವ ಆರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ.

ಕೇರಳದ ಕೋಯಿಕ್ಕೋಡ್ ನ ಒರ್ಕಟ್ಟೆರಿ ಗ್ರಾಮದವರಾದ ಮಜಿಝಿಯಾ 2017ರಿಂದ ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಾಹೆ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಪದವಿ ಮಾಡುತ್ತಿದ್ದಾರೆ. ಮುಂದಿನ ಻ಕ್ಟೋಬರ್ 13ರಿಂದ 21ರವರೆಗೆ ಟರ್ಕಿಯ ಅಂಟಾಲಿಯದಲ್ಲಿ ನಡೆಯಲಿರುವ 40ನೆ ಆರ್ಮ್ ರೆಸ್ಲಿಂಗ್ ನಲ್ಲಿ ಮಜಿಝಿಯಾ ಪಾಲ್ಗೊಳ್ಳುತ್ತಿದ್ದು, ಚಿನ್ನದ ಪದಕ ಗಳಿಸುವ ಗುರಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News