ಆ್ಯಪಲ್ ಉಪಗ್ರಹ ಕಾರ್ಯಾರಂಭ

Update: 2018-07-21 18:36 GMT

1298: ಇಂಗ್ಲಿಷ್ ಸೈನ್ಯವು ಸ್ಕಾಟ್‌ಲ್ಯಾಂಡ್‌ನ್ನು ಫಾಲ್‌ಕ್ರಿಕ್ ಯುದ್ಧದಲ್ಲಿ ಪರಾಭವಗೊಳಿಸಿತು.

1678: ಮರಾಠಾ ರಾಜ ಶಿವಾಜಿಯು ಈ ದಿನ ವೆಲ್ಲೂರು ಕೋಟೆಯನ್ನು ವಶಪಡಿಸಿಕೊಂಡನು.

1729: ಬ್ರೆಝಿಲ್‌ನ ಮಿನಾಸ್ ಗೆರಾಸ್ ಎಂಬಲ್ಲಿ ವಜ್ರದ ಗಣಿ ಪತ್ತೆಯಾಯಿತು.

1952: ಪೋಲೆಂಡ್ ಕಮ್ಯುನಿಸ್ಟ್ ಆಡಳಿತವನ್ನು ಅಂಗೀ ಕರಿಸಿತು.

1960: ಕ್ಯೂಬಾ ದೇಶವು ತನ್ನ ದೇಶದಲ್ಲಿನ ಅಮೆರಿಕ ಮಾಲಕತ್ವದ ಎಲ್ಲ ಸಕ್ಕರೆ ಕಾರ್ಖಾನೆಗಳನ್ನು ರಾಷ್ಟ್ರೀಕರಣಗೊಳಿಸಿತು.

1969: ಸೋವಿಯತ್ ಒಕ್ಕೂಟವು ಈ ದಿನ ‘ಸ್ಪುಟ್ನಿಕ್ 50’ ಮತ್ತು ‘ಮೊಲ್ನಿಯಾ 1-12’ ಹೆಸರಿನ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಿತು.

1981: ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ಈ ದಿನ ಮಹತ್ವದ್ದಾಗಿದೆ. ‘ದ ಏರಿಯನ್ ಪ್ಯಾಸೆಂಜರ್ ಪೇಯ್‌ಲೋಡ್ ಎಕ್ಸ್‌ಪರಿಮೆಂಟ್’(ಅಔಉ) ಹೆಸರಿನ ಭಾರತದ ಪ್ರಥಮ ಭೂಸ್ಥಿರ ಉಪಗ್ರಹವು ಇಂದು ಕಾರ್ಯಾರಂಭ ಮಾಡಿತು. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ 1981ರ ಜು.19ರಂದು ಪ್ರಯೋಗಾತ್ಮಕ ಸಂಪರ್ಕ ಉಪಗ್ರಹವಾಗಿ ಉಡಾಯಿಸಲ್ಪಟ್ಟಿತ್ತು. ‘ಆ್ಯಪಲ್’ನ ಈ ಯಶಸ್ಸು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ. ಈ ಉಪಗ್ರಹವು 673 ಕೆ.ಜಿ. ಉಡ್ಡಯನ ತೂಕವನ್ನು ಹೊಂದಿತ್ತು.

2013: ಚೀನಾದ ಗನ್ಸು ಪ್ರಾಂತದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 89 ಜನ ಸಾವಿಗೀಡಾಗಿ, 500 ಜನರು ಗಾಯಗೊಂಡರು.

1991: ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಬಸವರಾಜ ರಾಜಗುರು ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ