ಮದೀನಾ: ಮಂಗಳೂರಿನ ಹಜ್ ಯಾತ್ರಾರ್ಥಿಗಳನ್ನು ಬರಮಾಡಿಕೊಂಡ ಐಎಫ್‌ಎಫ್

Update: 2018-07-22 05:09 GMT

ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ 146 ಯಾತ್ರಾರ್ಥಿಗಳ ತಂಡ ಶನಿವಾರ ರಾತ್ರಿ ಮದೀನಾದ ಪ್ರಿನ್ಸ್ ಮುಹಮ್ಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.

ಯಾತ್ರಾರ್ಥಿಗಳನ್ನು ಇಂಡಿಯಾ ಫ್ರಟರ್ನಿಟಿ ಫೋರಂ(ಐಎಫ್‌ಎಫ್) ಕಾರ್ಯಕರ್ತರು ನೀರು, ಖರ್ಜೂರ ಮತ್ತು ಬಾಳೆಹಣ್ಣುಗಳನ್ನು ನೀಡಿ ಆದರದಿಂದ ಸ್ವಾಗತಿಸಿದರು.

ನಂತರ ಹಜ್ಜಾಜಿಗಳು ತಂಗುವ ವಸತಿಗೆ ತೆರಳಿದ ಐಎಫ್‌ಎಫ್ ಕಾರ್ಯಕರ್ತರು ಯಾತ್ರಾರ್ಥಿಗಳ ಲಗೇಜ್‌ಗಳನ್ನು ಸಾಗಿಸಲು ಸಹಕರಿಸಿ, ಹಜ್ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಐಎಫ್‌ಎಫ್ ಮದೀನಾ ಘಟಕದ ಅಧ್ಯಕ್ಷ ಝಫರುಲ್ಲಾ ಗೂಡಿನಬಳಿ, ಕಾರ್ಯಕರ್ತರಾದ ಅಶ್ರಫ್ ಮರವೂರು, ಆಸಿಫ್ ಕುಂಜತ್ತಬೈಲ್, ಅಬ್ದುಲ್ ಅಝೀಝ್ ಸುರಿಬೈಲ್, ಹಾರಿಸ್ ಮಳಲಿ, ಹನೀಫ್ ಮಡಂತ್ಯಾರ್, ಜಾವೇದ್‌ ಬಂದರ್ ಮತ್ತಿತರರು ಉಪಸ್ಥಿತರಿದ್ದರು.

 ಐಎಫ್‌ಎಫ್ ಐಎಫ್‌ಎಫ್ ಇಂಡಿಯಾ ಹಜ್ ವೆಲ್ಫೇರ್ ಫೋರಂನ ಸಹಭಾಗಿಯಾಗಿ ಹಜ್ಜಾಜಿಗಳ ಸೇವೆಯಲ್ಲಿ ನಿರತವಾಗಿದೆ.

ವರದಿ: ಅಬ್ದುಲ್ ಅಝೀಝ್ ಸುರಿಬೈಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News