ಮದೀನಾ ತಲುಪಿದ ಮಂಗಳೂರಿನ ಹಜ್ ಯಾತ್ರಾರ್ಥಿಗಳಿಗೆ ಐಎಚ್‌ಡಬ್ಲುಎಫ್ ಸ್ವಾಗತ

Update: 2018-07-22 05:46 GMT

ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ಕರ್ಮ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಪ್ರಥಮ ತಂಡವನ್ನು ಶನಿವಾರ ರಾತ್ರಿ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಹಜ್ ವೆಲ್ಫೇರ್ ಫೋರಂ(ಐಎಚ್‌ಡಬ್ಲುಎಫ್) ಕರ್ನಾಟಕ ಘಟಕವು ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿತು.

ಐಎಚ್‌ಡಬ್ಲುಎಫ್ ಕಾರ್ಯಕರ್ತರು ಯಾತ್ರಾರ್ಥಿಗಳನ್ನು ಖರ್ಜೂರ ಮತ್ತು ನೀರು ನೀಡಿ ಬರಮಾಡಿಕೊಂಡ ಅವರನ್ನು ವಸತಿ ಗೃಹಗಳಿಗೆ ತೆರಳುವಲ್ಲಿ ಸಹಕರಿಸಿದರು.

ಐಎಚ್‌ಡಬ್ಲುಎಫ್. ಸೌದಿ ಅರೇಬಿಯಾದಲ್ಲಿ ಕಾರ್ಯಾಚರಿಸುತ್ತಿರುವ 15 ಅನಿವಾಸಿ ಭಾರತೀಯ ಸಂಘಟನೆಗಳ ಒಕ್ಕೂಟವಾಗಿದೆ. ಹಜ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಇಂಡಿಯನ್ ಹಜ್ ವೆಲ್ಫೇರ್ ಫೋರಂನ 200 ಕಾರ್ಯಕರ್ತರು ಮದೀನಾದಲ್ಲಿ ನಿಯೋಜಿತರಾಗಿದ್ದಾರೆ.

ಸ್ವಾಗತ ವಹಿಸಿದ ತಂಡದ ನೇತೃತ್ವವನ್ನು ಝಫರುಲ್ಲಾ ಮಂಗಳೂರು, ಆಸಿಫ್ ಮಂಗಳೂರು, ಅಬ್ದುಲ್ ಅಝೀಝ್ ವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News