ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಒಟ್ಟು 9,72,140 ರೂ.ದಂಡ ವಸೂಲಿ

Update: 2018-07-24 13:11 GMT

ಬೆಂಗಳೂರು, ಜು.24: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ 5707 ಪ್ರಯಾಣಿಕರಿಂದ ಒಟ್ಟು 9,72,140 ರೂ.ದಂಡ ವಸೂಲಿ ಮಾಡಲಾಗಿದೆ.

ಮಹಿಳೆಯರಿಗೆ ಮೀಸಲಾಗಿದ್ದ ಆಸನದಲ್ಲಿ ಕುಳಿತು ಪ್ರಯಾಣಿಸಿದ 447 ಪುರುಷ ಪ್ರಯಾಣಿಕರಿಂದ 44,700ರೂ.ದಂಡ ವಸೂಲಿ ಮಾಡಲಾಗಿದೆ. ಪ್ರಯಾಣಿಕರು ಟಿಕೆಟ್ ಪಡೆಯದೆ ಸಂಸ್ಥೆಗೆ ಆರ್ಥಿಕವಾಗಿ ನಷ್ಟ ಮಾಡುವುದು ಕಾನೂನು ಬಾಹಿರ. ಬಿಎಂಟಿಸಿ ವತಿಯಿಂದ ಮತ್ತಷ್ಟು ಉತ್ತಮ ಸೇವೆಯನ್ನು ಪಡೆಯಬೇಕಾದರೆ ಟಿಕೆಟ್ ಪಡೆದು ಸಂಸ್ಥೆ ಜೊತೆಗೆ ಕೈ ಜೋಡಿಸಬೇಕೆಂದು ಬಿಎಂಟಿಸಿ ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News