ಮುಂಬೈ: ತೀವ್ರಗೊಂಡ ಮರಾಠಾ ಸಮುದಾಯಗಳ ಪ್ರತಿಭಟನೆ: ಬಸ್, ರೈಲುಗಳಿಗೆ ಕಲ್ಲು

Update: 2018-07-25 07:20 GMT

ಮುಂಬೈ, ಜು.25: ಮೀಸಲಾತಿಗಾಗಿ ಆಗ್ರಹಿಸಿ ಮರಾಠಾ ಸಮುದಾಯಗಳು ನಡೆಸುತ್ತಿರುವ ಬಂದ್ ಬುಧವಾರ ಮತ್ತೆ ಹಿಂಸಾರೂಪಕ್ಕೆ ತಿರುಗಿದೆ. ಘನ್ಸೋಲಿಯಲ್ಲಿ ಪ್ರತಿಭಟನಕಾರರು ಸ್ಥಳೀಯ ರೈಲುಗಳಿಗೆ ಕಲ್ಲೆಸೆದಿದ್ದಾರೆ. ಲಾಲ್ ಬಾಗ್ ನಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.

ಹಳಿಯಲ್ಲಿ ಪ್ರತಿಭಟನಕಾರರು ಅಡ್ಡಗಟ್ಟಿದ್ದರಿಂದ ಥಾಣೆ ರೈಲ್ವೆ ನಿಲ್ದಾಣದಲ್ಲಿ ರೈಲು ಸಂಚಾರ ಹಲವು ಗಂಟೆಗಳ ಕಾಲ ವ್ಯತ್ಯಯಗೊಂಡಿತು. ಭಾರೀ ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News