ಬೆಂಗಳೂರು: ಇಬ್ಬರು ಸುಲಿಗೆ ಆರೋಪಿಗಳ ಬಂಧನ

Update: 2018-07-26 16:16 GMT

ಬೆಂಗಳೂರು, ಜು.26: ಬೈಕ್ ಸವಾರರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ನಗದು, ಮೊಬೈಲ್ ದೋಚುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಸಂಪಿಗೆಹಳ್ಳಿ ಪೊಲೀಸರು, 2 ಚಿನ್ನದ ಸರ, 3 ಬೈಕ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಗೋವಿಂದಪುರ ನಿವಾಸಿ ಇಮ್ರಾನ್, ಸೈಯದ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
   
ಶ್ಯಾಮ್ ಕಿರಣ್ ಎಂಬವರು ಮೇ 29ರಂದು ಕೆಲಸ ಮುಗಿಸಿ ಹಣದ ಬ್ಯಾಗ್ ಸಮೇತ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಗ್ರಹಾರ ಗ್ರಾಮದಲ್ಲಿ ನಾಲ್ವರ ತಂಡ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಹಣದ ಬ್ಯಾಗ್ ನೀಡುವಂತೆ ಕೇಳಿದ್ದರು. ಆದರೆ, ಕಿರಣ್ ಬ್ಯಾಗ್ ಕೊಡಲು ನಿರಾಕರಿಸಿದಾಗ ಆರೋಪಿಗಳು ಚಾಕುವಿನಿಂದ ಅವರ ಎಡಗೈಗೆ ಇರಿದು ಗಾಯಗೊಳಿಸಿ 30 ಸಾವಿರ ರೂ.ಹಣವಿದ್ದ ಬ್ಯಾಗ್, ಮೊಬೈಲ್ ಕಸಿದು ಪರಾರಿಯಾಗಿದ್ದರು.

ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಬಂಧನದಿಂದ ಈಶಾನ್ಯ ವಿಭಾಗದಲ್ಲಿ ನಡೆದಿದ್ದ ಎರಡು ಸರಗಳ್ಳತನ, ಮೂರು ಸುಲಿಗೆ ಪ್ರಕರಣ ಹಾಗೂ ಇತರ ವಿಭಾಗದ 3 ಬೈಕ್ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ಮಂಡ್ಯ, ಚನ್ನಪಟ್ಟಣ, ಮೈಸೂರು ಮತ್ತಿತರ ಕಡೆಗಳಲ್ಲಿ ನಡೆಸಿರುವ ವಾಹನ ಕಳವು ಮತ್ತು ಸರಗಳವು ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News