ಯೋಗೇಶ್ವರ್‌ಗೆ ಪರ್ಯಾಯ ಭೂಮಿ ನೀಡುವ ವಿಚಾರ: ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ

Update: 2018-07-26 16:37 GMT

ಬೆಂಗಳೂರು, ಜು.26: ರುದ್ರಭೂಮಿಗೆ ಯಲಹಂಕದ ಸಿಂಗಾಪುರ ಗ್ರಾಮದ ಎಸ್.ವಿ.ಯೋಗೇಶ್ವರ್‌ಗೆ ಸೇರಿದ 24 ಗುಂಟೆ ಜಾಗ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಈಗಾಗಲೇ ಪರ್ಯಾಯ ಭೂಮಿಯನ್ನು ಗುರುತಿಸಲಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದು ಸರಕಾರಿ ಪರ ವಕೀಲರು ಹೈಕೋರ್ಟ್ ತಿಳಿಸಿದರು.

ಪ್ರಕರಣ ಸಂಬಂಧ ಯೋಗೇಶ್ವರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಒಂದು ತಿಂಗಳೊಳಗೆ ಜಮೀನು ಮಂಜೂರು ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯುವುದಾಗಿ ಸರಕಾರಿ ಪರ ವಕೀಲರು ಪೀಠಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಬೆಂಗಳೂರು ಉತ್ತರ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ತಮಗೆ ಸೇರಿದ್ದ 24 ಗುಂಟೆ ಜಾಗವನ್ನು ಸ್ಮಶಾನ ಭೂಮಿ ವಿಸ್ತರಣೆಗೆಂಂದು ನಗರ ಜಿಲ್ಲಾಡಳಿತವು ಯಾವುದೇ ಆದೇಶ ಹೊರಡಿಸದೆ ವಶಪಡಿಸಿಕೊಂಡಿದೆ. ಹೀಗಾಗಿ, ಪರ್ಯಾಯ ಜಮೀನು ಕಲ್ಪಿಸುವಂತೆ ಹೈಕೊರ್ಟ್ ಆದೇಶಿಸಿ ಒಂದು ವರ್ಷ ಕಳೆದರೂ ಜಮೀನು ನೀಡಿಲ್ಲ ಎಂದು ಯೋಗೇಶ್ವರ್ ಅರ್ಜಿಯಲ್ಲಿ ದೂರಿದ್ದರು. ಅಲ್ಲದೆ, ಯೋಗೇಶ್ವರ್‌ಗೆ ಪರ್ಯಾಯ ಜಮೀನು ಗುರುತಿಸುವಂತೆ ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News