ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ ಯೋಜನೆ: 16 ಪತ್ರಕರ್ತರಿಗೆ ಮಂಜೂರು

Update: 2018-07-26 16:44 GMT

ಬೆಂಗಳೂರು, ಜು.26: ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆಯಡಿ 16 ಮಂದಿ ಪತ್ರಕರ್ತರಿಗೆ ಮಾಸಿಕ 10 ಸಾವಿರ ರೂ. ಆಜೀವ ಮಾಸಾಶನ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ಎಸ್.ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಗೋಕಾಕ್‌ನ ವೀರಣ್ಣ ಸಿದ್ದಪ್ಪ ಗಣೇಶವಾಡಿ, ಮಂಡ್ಯ ಜಿಲ್ಲೆಯ ಪಾಂಡವಪುರದ ಎಸ್.ಚಂದ್ರಶೇಖರ್, ಮಂಡ್ಯದ ಎಂ.ಜಿ.ನಾಗರಾಜ್, ಶಿವಮೊಗ್ಗದ ಎಸ್.ಷಣ್ಮುಗಂ, ಚಾಮರಾಜನಗರದ ಸಿ.ಆರ್.ಸುಗುಣಾಕರನ್, ಮೈಸೂರಿನ ಮೊಹಮದ್ ನಯೀಮುಲ್ಲಾ, ಬೆಂಗಳೂರಿನ ಜಿ.ಅಶ್ವಥ್, ಬೆಂಗಳೂರಿನ ಸೋಮಸುಂದರ ರೆಡ್ಡಿ, ವಿಜಯಪುರದ ಶೈಲಜಾ ಪಿ.ಮಮದಾಪುರ.

ಗದಗ ಜಿಲ್ಲೆ ಮುಂಡರಗಿಯ ಹುಚ್ಚೀರಪ್ಪಗೆದ್ದೆಪ್ಪ ಸಜ್ಜನರ, ಬೆಂಗಳೂರಿನ ಎಸ್.ಎಲ್.ಗುರುಶಾಂತ, ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀಕಾಂತ ರಾಮನಗೌಡ ಪಾಟೀಲ್, ಬೆಂಗಳೂರಿನ ಎನ್.ಎಸ್. ರಾಮಚಂದ್ರ, ಬೆಂಗಳೂರಿನ ಎಂ.ಕೆ. ವಿದ್ಯಾರಣ್ಯ ಹಾಗೂ ಧಾರವಾಡದ ಗಣೇಶ ನಾರಾಯಣ ಜೋಶಿ ಈ ಯೋಜನೆಯ ಫಲಾನುಭಗಳಾಗಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News