ಬಸ್ ಪಾಸ್: ಮಕ್ಕಳಲ್ಲಿ ಭೇದವೇಕೆ?

Update: 2018-07-26 18:34 GMT

ಮಾನ್ಯರೇ,

ಸರಕಾರಿ ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಲು ಚಿಂತನೆ ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರಕಾರದ ನಡೆ ಎಷ್ಟು ಸರಿ?

ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಬಸ್‌ಪಾಸ್ ಹೆಸರಿನಲ್ಲಿ ಸರಕಾರ ವಿಭಜಿಸಲು ಹೊರಟಿದೆಯೇ ಎನ್ನುವ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ. ಎಲ್ಲಾ ಖಾಸಗಿ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಷ್ಟೇ ಓದುತ್ತಾರೆ ಎಂಬುದು ತಪ್ಪು ಕಲ್ಪನೆ. ಮಕ್ಕಳನ್ನು ಭವಿಷ್ಯದ ಸ್ಪರ್ಧಾ ಪ್ರಪಂಚಕ್ಕೆ ಅಣಿಯಾಗುವಂತೆ ಮಾಡಲು ಅದಕ್ಕೆ ತಕ್ಕುದಾದ ಶಾಲೆಗೆ ಸೇರಿಸಲು ತಂದೆ ತಾಯಂದಿರು ಹೊಟ್ಟೆಬಟ್ಟೆ ಕಟ್ಟಿ, ಸಾಲ ಮಾಡಿ ಓದಿಸುತ್ತಾರೆ. ಆದರೆ ಸರಕಾರ ಈ ಬಗ್ಗೆ ಚಿಂತನೆಯನ್ನೇ ಮಾಡುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಓದಲೇ ಬಾರದೆಂದರೆ ಇಂತಹ ಶಾಲೆಗಳಿಗೆ ಅನುಮತಿ ಕೊಡುವುದೇಕೆ? ಶೈಕ್ಷಣಿಕ ಪದ್ಧತಿಯಲ್ಲಿ ಭೇದಗಳನ್ನು ತರುವುದೇಕೆ? ಎಲ್ಲ ಶಾಲೆಗಳಲ್ಲೂ ಒಂದೇ ಶೈಕ್ಷಣಿಕ ಪದ್ಧತಿಯಿದ್ದರೆ ಪೋಷಕರೇಕೆ ಖಾಸಗಿ ಶಾಲೆಗಳನ್ನು ಆಶ್ರಯಿಸಬೇಕು. ಖಾಸಗಿ ಶಾಲೆಗಳು ಅಣಬೆಗಳಂತೆ ಎಲ್ಲಡೆ ಪ್ರತಿಷ್ಠಾಪಿಸುವಂತಾಗಲು ಅನುಮತಿ ನೀಡಿ, ಆನಂತರ ಮಕಳನ್ನು, ಪೋಷಕರನ್ನು ಜರೆಯುವುದು ಎಷ್ಟು ಸರಿ? ಮಕ್ಕಳನ್ನು ಮಕ್ಕಳಾಗಿ ಕಾಣಬೇಕು. ಆದ್ದರಿಂದ ಮಕ್ಕಳ ಬಸ್ ಪಾಸ್ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ನೀಡಿ ಮಕ್ಕಳು ತಮ್ಮ ಶಿಕ್ಷಣ ಪೂರ್ಣಗೊಳಿಸಲು ಸರಕಾರ ಸಹಕರಿಸಬೇಕಾಗಿದೆ.
 

Writer - -ಚಂದು ಸಿ. ಎನ್., ಮೈಸೂರು

contributor

Editor - -ಚಂದು ಸಿ. ಎನ್., ಮೈಸೂರು

contributor

Similar News