×
Ad

ಹುತಾತ್ಮ ಯೋಧರ ಅವಲಂಬಿತರ ಅರ್ಜಿ 15 ದಿನದಲ್ಲಿ ಇತ್ಯರ್ಥ: ಸಚಿವ ದೇಶಪಾಂಡೆ

Update: 2018-07-27 17:52 IST

ಬೆಂಗಳೂರು, ಜು.27: ದೇಶದ ರಕ್ಷಣೆಯ ಸಲುವಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿರುವ ರಕ್ಷಣಾ ಸಿಬ್ಬಂದಿಯ ಅವಲಂಬಿತರು ಜಮೀನು, ನಿವೇಶನ ಅಥವಾ ಆರ್ಥಿಕ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳನ್ನುಮುಂದಿನ 15 ದಿನದಲ್ಲಿ ಇತ್ಯರ್ಥ ಪಡಿಸಲಾಗುವುದೆಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬಹಳ ವರ್ಷಗಳಿಂದ ಹುತಾತ್ಮ ಯೋಧರ ಅವಲಂಬಿತರ ಅರ್ಜಿಗಳು ಇತ್ಯರ್ಥ ಆಗಿಲ್ಲವೆಂದು ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದು ಶ್ಲಾಘನೀಯ. ಮುಂದಿನ 15 ದಿನದಲ್ಲಿ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಯಾವ, ಯಾವ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇವೆಯೋ ಅವುಗಳನ್ನು ಪರಿಶೀಲಿಸಿ ಪ್ರಕರಣದ ವಸ್ತುಸ್ಥಿತಿ, ಅದು ಎಷ್ಟು ಕಾಲದಿಂದ ಬಾಕಿ ಇದೆ ಮತ್ತು ಬಾಕಿ ಇರಲು ಕಾರಣವಾಗಿರುವ ಅಂಶಗಳೇನು ಎಂಬ ಬಗ್ಗೆ ಸಮಗ್ರ ವಿವರಗಳನ್ನುಳ್ಳ ವರದಿಯನ್ನು ತುರ್ತಾಗಿ ತಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News