ಕಳವು ಪ್ರಕರಣ: ಮಹಿಳೆಯರಿಬ್ಬರ ಬಂಧನ

Update: 2018-07-27 14:33 GMT

ಬೆಂಗಳೂರು, ಜು.27: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸಿ ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನು ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಮೂಲದ ಲಕ್ಷ್ಮೀದೇವಿ(38) ಹಾಗೂ ಮೀನಾಕ್ಷಿ(30) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ರೈಲಿನಲ್ಲಿ ಬಂದು ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸಿ ಮಹಿಳಾ ಪ್ರಯಾಣಿಕರುಗಳ ಬ್ಯಾಗ್‌ಗಳಲ್ಲಿ ಚಿನ್ನಾಭರಣ, ಹಣ ನಗದು ಕಳವು ಮಾಡುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.

ಆರೋಪಿಗಳ ಬಂಧಿನದಿಂದ ಆರ್.ಎಂ.ಸಿ ಯಾರ್ಡ್ ಠಾಣೆ-13, ಪೀಣ್ಯ- ಠಾಣೆ-5, ಯಶವಂತಪುರ ಠಾಣೆ-3, ಮಲ್ಲೇಶ್ವರಂ ಠಾಣೆ-4, ಜಾಲಹಳ್ಳಿ ಠಾಣೆ-1, ಸೋಲದೇವನಹಳ್ಳಿ ಪೊಲೀಸ್ ಠಾಣೆ-1 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವರ ಬಳಿಯಲ್ಲಿದ್ದ 35 ಲಕ್ಷ ಬೆಲೆಬಾಳುವ 1 ಕೆ.ಜಿ. 275 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News