ಮಕ್ಕಾ: ಕೆಸಿಎಫ್ ಸ್ವಯಂ ಸೇವಕರ ತಝ್ಕೀಯತ್ ಶಿಬಿರ

Update: 2018-07-28 10:36 GMT

ಸೌದಿ ಅರೇಬಿಯಾ, ಜು.28: ಕೆಸಿಎಫ್ ಮಕ್ಕತ್ತುಲ್ ಮುಕರ್ರಂ ಸೆಕ್ಟರ್ ವತಿಯಿಂದ ಹಜ್‌ಸ್ವಯಂ ಸೇವಕರ ಪೂರ್ವ ತಯಾರಿ ತಝ್ಕೀಯತ್ ಶಿಬಿರವು ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆಯಲ್ಲಿ ಇಲ್ಲಿನ ಕುದೈ ಏಷ್ಯನ್ ಹಾಲ್ ನಲ್ಲಿ ಜರುಗಿತು.

ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಕೆಸಿಎಫ್ ಮಕ್ಕತ್ತುಲ್ ಮುಕರ್ರಂ ಸಾಂತ್ವನ ವಿಭಾಗದ ಅಧ್ಯಕ್ಷ ಮೂಸಾ ಹಾಜಿ ಕಿನ್ಯ, ಸೆಕ್ಟರ್ ಶಿಕ್ಷಣ ವಿಭಾಗದ ಅಧ್ಯಕ್ಷ ಉಸ್ಮಾನ್ ಸಅದಿ ನೆಲ್ಯಾಡಿ ಮಾತಾನಾಡಿ ಶುಭ ಹಾರೈಸಿದರು.

ಇದೇ ಸಂದರ್ಭ ಹರಂ ಶರೀಫ್‌ನಲ್ಲಿ 40 ದಿನಗಳ ಕಾಲ ನಡೆಯುವ ಎಚ್. ವಿ. ಸಿ. ಸೇವೆಗಳಿಗೆ ಕ್ಯಾಪ್ಟನ್‌ಗಳಾಗಿ ಮೂಸಾ ಹಾಜಿ ಕಿನ್ಯ ಹಾಗೂ ಹನೀಫ್‌ ಸಖಾಫಿ ಬೊಳ್ಮಾರ್, ಹಾಗೂ ಮೀಡಿಯಾ ಕನ್ವೀನರ್‌ರಾಗಿ ಕಲಂದರ್ ಶಾಫಿ ಅಸೈಗೋಳಿಯವರನ್ನು ಆಯ್ಕೆ ಮಾಡಲಾಯಿತು

ಕೆಸಿಎಫ್ ಮಕ್ಕತುಲ್ ಮುಕ್ಕರ್ರಂ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್‌ವಿಸಿ ಸೆಕ್ಟರ್ ಕೋ ಆರ್ಡಿನೇಟರ್ ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿದರು.

 ಸೆಕ್ಟರ್ ಅಡ್ಮಿನ್ ವಿಭಾಗದ ಕಾರ್ಯದರ್ಶಿ ಕಲಂದರ್ ಶಾಫಿ ಅಸೈಗೋಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News