ರಾಮ್‍ದೇವ್ ಭಾರತದ ಭವಿಷ್ಯದ ಪ್ರಧಾನಿಯಾಗಬಹುದು ಎಂದ ‘ನ್ಯೂಯಾರ್ಕ್ ಟೈಮ್ಸ್’

Update: 2018-07-29 08:24 GMT

ಹೊಸದಿಲ್ಲಿ, ಜು.29: ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವೊಂದರಲ್ಲಿ ಬಾಬಾ ರಾಮ್‍ದೇವ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಹೋಲಿಸಲಾಗಿದ್ದು, ಅವರು ಮುಂದೊಂದು ದಿನ ಭಾರತದ ಪ್ರಧಾನಿಯಾಬಹುದು ಎಂದು ಹೇಳಲಾಗಿದೆ.

ನರೇಂದ್ರ ಮೋದಿಯವರು ಪ್ರಧಾನಿಯಾಗಲು ಅವರು ಹೇಗೆ ನೆರವಾಗಿದ್ದಾರೆ ಎನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದ್ದು, ಕ್ರಮೇಣ ಭಾರತದ ರಾಜಕೀಯದ ಅತ್ಯುನ್ನತ ಹುದ್ದೆಗೆ ಅವರು ಏರಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

"ರಾಮ್‍ದೇವ್ ಬಲಪಂಥೀಯ ಹಿಂದೂಗಳ ಪ್ರಮುಖ ಧ್ವನಿ. 2014ರ ಚುನಾವಣಾ ಪ್ರಚಾರದಲ್ಲಿ ಅವರ ಸೂಚಿತ ಪ್ರಚಾರ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ನೆರವಾಗಿದೆ. ಮೋದಿ ಗೆದ್ದ ಬಳಿಕ ರಾಮದೇವ್ ಅವರು ದೊಡ್ಡ ರಾಜಕೀಯ ಬದಲಾವಣೆ ಘಟಿಸಲು ಭೂಮಿಕೆ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿದ್ದರು" ಎಂದು ಲೇಖನ ವಿವರಿಸಿದೆ.

"ರಾಮ್‍ದೇವ್ ಅವರು ಸ್ವತಃ ಪ್ರಧಾನಿ ಹುದ್ದೆಗೆ ಪ್ರಯತ್ನಿಸಬಹುದು ಎಂಬ ಗುಮಾನಿ ಇದೆ. ಟ್ರಂಪ್ ಅವರಂತೆ ಬಹುಕೋಟಿ ಡಾಲರ್ ಸಾಮ್ರಾಜ್ಯವನ್ನು ರಾಮ್‍ದೇವ್ ಹೊಂದಿದ್ದಾರೆ. ಟ್ರಂಪ್ ಅವರಂತೆ ರಾಮ್‍ದೇವ್ ಕೂಡಾ ಅದ್ಭುತ ಟಿವಿ ವ್ಯಕ್ತಿತ್ವ. ಬ್ರಾಂಡಿಂಗ್ ಅವಕಾಶಕ್ಕೆ ಅವರು ಎಂದೂ ಪ್ರತಿರೋಧ ವ್ಯಕ್ತಪಡಿಸಿಲ್ಲ. ಅವರ ಹೆಸರು ಮತ್ತು ಮುಖ ಭಾರತದ ಎಲ್ಲೆಡೆ ಇದೆ" ಎಂದು ನ್ಯೂಯಾರ್ಕ್ ಟೈಮ್ಸ್ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News