ನಾಲ್ಕು ಪ್ರತ್ಯೇಕ ಅಕ್ರಮ ಚಿನ್ನ ಸಾಗಾಟ ಪ್ರಕರಣ: 4 ಆರೋಪಿಗಳ ಬಂಧನ

Update: 2018-07-29 13:38 GMT

ಬೆಂಗಳೂರು, ಜು.29: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಡಪ ಜಿಲ್ಲೆಯ ಸೈಫುಲ್ಲಾ ಶೇಖ್, ದಕ್ಷಿಣ ಕೊರಿಯಾದ ಹ್ಯುನ್ಹಾ ಜುಗ್, ಆಂಧ್ರಪ್ರದೇಶದ ಶಿವಕುಮಾರ್ ಹಾಗೂ ಕೇರಳದ ಸಲ್ಮಾನ್ ಬಿನ್ ಫಾರ್ಸಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತರಿಂದ ಬರೋಬ್ಬರಿ 60 ಲಕ್ಷ ಕ್ಕೂ ಅಧಿಕ ಮೌಲ್ಯದ 2 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ. ಬಹ್ರೇನ್‌ನಿಂದ ಬಂದಿಳಿದ ಸೈಫುಲ್ಲಾನಿಂದ 27 ಲಕ್ಷ ಮೌಲ್ಯದ 874 ಗ್ರಾಂ ಚಿನ್ನ, ಹಾಂಗ್‌ಕಾಂಗ್‌ನಿಂದ ಬಂದಿಳಿದ ಹ್ಯುನ್ಹಾ ಜುಗ್‌ನಿಂದ 16 ಲಕ್ಷ ಮೌಲ್ಯದ 514 ಗ್ರಾಂ ಚಿನ್ನ, ಅಬುಧಾಬಿಯಿಂದ ಬಂದ ಸಲ್ಮಾನ್ ಬಿನ್ ಫಾರ್ಸಿ ಎಂಬುವರಿಂದ 10 ಲಕ್ಷ ಮೌಲ್ಯದ 318 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News