×
Ad

ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: 2 ಲಕ್ಷ ರೂ.ಪರಿಹಾರ ನೀಡಿದ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ

Update: 2018-07-30 18:13 IST

ಬೆಂಗಳೂರು, ಜು.30: ಬಿಬಿಎಂಪಿ ಆರು ತಿಂಗಳು ಸಂಬಳ ನೀಡದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಪೌರ ಕಾರ್ಮಿಕ ಸುಬ್ರಹ್ಮಣ್ಯ ಕುಟುಂಬಕ್ಕೆ ಪಾಲಿಕೆ ಸದಸ್ಯ ಹಾಗೂ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಎರಡು ಲಕ್ಷ ರೂ ಪರಿಹಾರ ಧನ ನೀಡಿದರು.

ಸೋಮವಾರ ಬಿಬಿಎಂಪಿಯಲ್ಲಿನ ತಮ್ಮ ಕಚೇರಿಯಲ್ಲಿ ಸುಬ್ರಹ್ಮಣ್ಯ ಪತ್ನಿ ಕವಿತಾ ಹಾಗೂ ಅವರ ಮಕ್ಕಳ ಕೈಗೆ ಎರಡು ಲಕ್ಷ ರೂ.ನೀಡಿ, ಇದು ನನ್ನ ವೈಯಕ್ತಿಕ ಹಣವಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ಪೌರಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆಯಿಂದಾಗಿ ಇಡೀ ಕುಟುಂಬ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿದೆ. ಪೌರಕಾರ್ಮಿಕರು ಯಾವುದೆ ಕಾರಣಕ್ಕೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬಾರದು. ಪೌರಕಾರ್ಮಿಕರಿಗೆ ಸಂಬಂಧಿದ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಿಬಿಎಂಪಿಯ ಎಲ್ಲ ಸದಸ್ಯರು ಸಿದ್ಧರಿದ್ದಾರೆ. ಅಧಿಕಾರಿಗಳ ಸಣ್ಣ ಲೋಪದಿಂದಾಗಿ ಸಂಬಳ ಬರುವುದು ತಡವಾಗಿತ್ತು. ಮುಂದಿನ ದಿನಗಳಲ್ಲಿ ಹೀಗಾಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News