ಆ.6 ರಂದು ಶ್ರೇಷ್ಠ ವಿಜ್ಞಾನಿ-ಇಂಜಿನಿಯರ್ ಪ್ರಶಸ್ತಿ ಪ್ರದಾನ

Update: 2018-07-31 14:15 GMT

ಬೆಂಗಳೂರು, ಜು.31: ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆ.6ರಂದು ಸಂಜೆ 4ಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಜೆ.ಎನ್.ಟಾಟಾ ಸಭಾಂಗಣದಲ್ಲಿ ರಾಜ್ಯದ 13ಮಂದಿ ಹಿರಿಯ ವಿಜ್ಞಾನಿ ಹಾಗೂ ಎಂಜಿನಿಯರ್‌ಗಳಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಸರ್.ಎಂ. ವಿಶ್ವೇಶ್ವರಯ್ಯ, ಡಾ.ರಾಜಾ ರಾಮಣ್ಣ, ಸರ್ ಸಿ.ವಿ.ರಾಮನ್, ಪ್ರೊ.ಸತೀಶ್ ಧವನ್ ಮತ್ತು ಡಾ.ಕಲ್ಪನಾ ಚಾವ್ಲಾ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್, ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರು: -ಪ್ರೊ.ಬಿ.ಜಿ.ಮೂಲಿಮನಿ, ಅಧ್ಯಕ್ಷರು, ಡಾ.ಎಂ.ಐ.ಸವದತ್ತಿ ವಿದ್ಯಾವರ್ಧಕ ಸಂಸ್ಥೆ, ಧಾರವಾಡ.
-ಡಾ.ಎಸ್.ಅಯ್ಯಪ್ಪನ್, ಮಾಜಿ ಕಾರ್ಯದರ್ಶಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು.

-ಡಾ. ಜಿ.ಗುರುರಾಜ, ಸೀನಿಯರ್ ಪ್ರೊಫೆಸರ್(ನಿಮ್ಹಾನ್ಸ್), ಬೆಂಗಳೂರು.

-ಪ್ರೊ.ಎಚ್.ಎ.ರಂಗನಾಥ, ವಿಶ್ರಾಂತ ಉಪಕುಲಪತಿ, ಬಯೋಲಾಜಿಕಲ್ ಸೈನ್ಸ್ ವಿಭಾಗ, ಬೆಂಗಳೂರು.

-ಡಾ. ಕರುಣಾಕರ ಎನ್. ಪ್ರೊಫೆಸರ್, ಸೆಂಟ್ರಲ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಎನ್ವಿರಾನ್ಮೆಂಟಲ್ ರೇಡಿಯೊ ಆಕ್ಟಿವಿಟಿ, ಮಂಗಳೂರು ವಿಶ್ವವಿದ್ಯಾಲಯ.

-ಡಾ. ಅರುಣ್ ಮೋಹನ್ ಇಸ್ಲೊರ್, ಅಸೋಸಿಯೆಟ್ ಪ್ರೊಫೆಸರ್, ರಸಾಯನಶಾಸ್ತ್ರ ವಿಭಾಗ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕರ್ನಾಟಕ, ಸುರತ್ಕಲ್, ಮಂಗಳೂರು.

-ಡಾ ಜಗದೀಶ ತೀರ್ಥಹಳ್ಳಿ, ಪ್ರೊಫೆಸರ್, ಸೈಕಿಯಾಟ್ರಿ ಇಲಾಖೆ, ನಿಮ್ಹಾನ್ಸ್, ಬೆಂಗಳೂರು.
 
-ಡಾ. ಪ್ಯಾಟ್ರಿಕ್ ಡಿ’ಸಿಲ್ವಾ, ಅಸೋಸಿಯೆಟ್ ಪ್ರೊಫೆಸರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು.

-ಡಾ. ನಟರಾಜ ಕರಾಬಾ ಎನ್, ಪ್ರೊಫೆಸರ್, ಕ್ರಾಪ್ ಫಿಸಿಯಾಲಜಿ ಇಲಾಖೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು.
  
-ಡಾ. ಪ್ರವೀಣ್ ಸಿ ರಾಮಮೂರ್ತಿ, ಅಸೋಸಿಯೆಟ್ ಪ್ರೊಫೆಸರ್ ಮೆಟೀರಿಯಲ್ಸ್ ಇಂಜಿನಿಯರಿಂರ್ ವಿಭಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು.

-ಡಾ.ಕೆ.ವಿದ್ಯಾ ಶೆಟ್ಟಿ, ಅಸೋಸಿಯೆಟ್ ಪ್ರೊಫೆಸರ್, ಕೆಮಿಕಲ್ ಎಂಜಿನಿಯರಿಂಗ್ ವಿಭಾಗ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ -ಕರ್ನಾಟಕ, ಸುರತ್ಕಲ್, ಮಂಗಳೂರು.

-ಡಾ. ಚಂದ್ರ ಆರ್. ಮೂರ್ತಿ, ಅಸೋಸಿಯೆಟ್ ಪ್ರೊಫೆಸರ್, ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು.

-ಪ್ರೊ.ಮನೀಶ ಎಸ್. ಇನಾಮ್ದರ್, ಪ್ರೊಫೆಸರ್, ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News