×
Ad

ರಾಜಕೀಯ ಮಾಡಲೆಂದೇ ರಾಜ್ಯ ಒಡೆಯುವ ಮಾತುಗಳನ್ನಾಡುತ್ತಿರುವ ಬಿಜೆಪಿ: ಡಿಸಿಎಂ ಪರಮೇಶ್ವರ್

Update: 2018-08-02 19:09 IST

ಬೆಂಗಳೂರು, ಆ. 2: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಬಿಜೆಪಿ ಮುಖಂಡರು ರಾಜಕೀಯ ಮಾಡಲೆಂದೇ ರಾಜ್ಯ ಒಡೆಯುವ ಮಾತುಗಳನ್ನಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದು ಅಖಂಡ ಕರ್ನಾಟಕ. ರಾಜ್ಯವನ್ನು ಒಡೆಯುವ ಮಾತನ್ನು ಯಾರೂ ಆಡಬಾರದು. ಬಿಜೆಪಿ ಮುಖಂಡರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಈ ಹಿಂದೆ ಬಂದ ಎಲ್ಲ ಸರಕಾರಗಳು ಉತ್ತರ ಕರ್ನಾಟಕಕ್ಕೆ ಅವರದ್ದೇ ಆದ ಕೊಡುಗೆ ನೀಡಿವೆ. ನಮ್ಮ ಸರಕಾರ ಆ ಭಾಗದವರಿಗೆ ವ್ಯತಿರಿಕ್ತವಾಗಿ ಯಾವ ಕೆಲಸ ಮಾಡುವುದಿಲ್ಲ. ಎಸ್.ಎಂ ಕೃಷ್ಣ ಕಾಲದಲ್ಲಿ ಹಿಂದುಳಿದ ತಾಲೂಕುಗಳಿಗೆ ಬಿಡುಗಡೆ ಮಾಡಿದ ಅನುದಾನದಿಂದ ಸಾಕಷ್ಟು ಕೆಲಸವಾಗಿದೆ. ಈ ಕಾರ್ಯಕ್ರಮಗಳನ್ನು ನಮ್ಮ ಸರಕಾರವೂ ಮುಂದುವರೆಸಿಕೊಂಡು ಹೋಗುತ್ತಿವೆ. ನಮ್ಮೆಲ್ಲರದ್ದೂ ಒಂದೇ ಭಾಷೆ, ಒಂದೇ ನೆಲ. ಎಲ್ಲರೂ ಕನ್ನಡಿಗರೇ ಎಂದು ನುಡಿದರು.

ಅಕ್ರಮ ವಲಸಿಗರ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಪೊಲೀಸರು ಇಂಥವರನ್ನು ಹುಡುಕುವ ಕೆಲಸದಲ್ಲಿದ್ದು, ಆಫ್ರಿಕಾ ದೇಶದ 107 ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದರೂ ಇಲ್ಲೇ ಇರುವುದು ಗಮನಕ್ಕೆ ಬಂದಿದ್ದು, ಅವರನ್ನು ವಾಪಾಸ್ ಕಳುಹಿಸುವ ಕೆಲಸ ಮಾಡಲಾಗಿದೆ. ಅಧಿಕೃತ ಕಾಗದಪತ್ರ ಇಲ್ಲದಿರುವವರನ್ನು ಹಿಂದಕ್ಕೆ ಕಳುಹಿಸಲಾಗುವುದು’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News