ಕಿಕಿ ಚಾಲೆಂಜ್ ಸ್ವೀಕರಿಸದಂತೆ ಸರಕಾರ ಮನವಿ

Update: 2018-08-02 14:00 GMT

ಬೆಂಗಳೂರು, ಆ.2: ಕಿಕಿ ಚಾಲೆಂಜ್‌ನ ಪರಿಣಾಮವನ್ನು ಅರಿತ ಸರಕಾರ ಯುವಜನತೆಗೆ ಈ ಅಪಾಯಕಾರಿ ಚಾಲೆಂಜ್‌ಅನ್ನು ಸ್ವೀಕರಿಸಿ ಜೀವಕ್ಕೆ ಕುತ್ತು ತಂದುಕೊಳ್ಳದಂತೆ ಎಚ್ಚರಿಕೆ ನೀಡಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಾಮಾಜಿಕ ಮಾಧ್ಯಮ ಬಳಕೆ ಮಾಡಲು ನಮ್ಮ ವಿರೋಧವಿಲ್ಲ. ಆದರೆ, ಅದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವಂತೆ ಮತ್ತು ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವ ಗೀಳಾಗಿ ಕಾಡಬಾರದು ಎಂದಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಈ ಸವಾಲನ್ನು ಸ್ವೀಕರಿಸಬೇಡಿ. ಇದು ನಿಮಗೆ ಮತ್ತು ಬೇರೆಯವರಿಗೆ ತೊಂದರೆಯನ್ನು ಉಂಟುಮಾಡಬಹುದು. ಪೋಷಕರು ತಮ್ಮ ಮಕ್ಕಳಿಗೆ ಈ ಅಪಾಯಕಾರಿ ಆಟದ ಬಗ್ಗೆ ಅರಿವು ಮೂಡಿಸಬೇಕು ಮತ್ತು ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ಗೀಳು ಆಗಿ ಪರಿಣಮಿಸಿ ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಬರಬಹುದು, ಕಿಕಿ ಚಾಲೆಂಜ್ ಅಪಾಯಕಾರಿ, ಈ ರೀತಿ ಮಾಡಿದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸುಮ್ಮನಿರಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಿಕಿ ಚಾಲೆಂಜ್ ನಿಮ್ಮ ದೇಹಕ್ಕೆ ಮತ್ತು ಗಾಡಿಗೆ ಅಪಾಯಕಾರಿ ಎಂದು ಹಾಗೂ ಕಿಕಿ ಚಾಲೆಂಜ್‌ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಅಪ್ ಲೋಡ್ ಮಾಡಿ ಆಡುಗೋಡಿ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News