ಅಸ್ಸಾಂ ಎನ್. ಆರ್‌.ಸಿ.: "ಪ್ರಜಾಪ್ರಭುತ್ವ ಬುಡಮೇಲುಗೊಳಿಸುವ ಹುನ್ನಾರ"

Update: 2018-08-03 04:42 GMT

ವಾಷಿಂಗ್ಟನ್, ಆ.3: 40 ಲಕ್ಷ ಮಂದಿಯನ್ನು ಅಸ್ಸಾಮಿನ ಅಂತಿಮ ಪಟ್ಟಿಯಿಂದ ಕಿತ್ತು ಹಾಕಿರುವ ಅಕ್ರಮ ಪತ್ತೆಯಾಗುವವರೆಗೂ ನ್ಯಾಷನಲ್ ರಿಜಿಸ್ಟ್ರಿ ಆಫ್ ಸಿಟಿಜನ್ಸ್ ಯೋಜನೆಯನ್ನು ಅಮಾನತು ಮಾಡಬೇಕು ಎಂದು ಇಂಡಿಯನ್- ಅಮೆರಿಕನ್ ಮುಸ್ಲಿಂ ಕೌನ್ಸಿಲ್(ಐಎಎಂಸಿ) ಆಗ್ರಹಿಸಿದೆ.

ಅಸ್ಸಾಮಿಗಳ ಗುರುತಿನ ಪುರಾವೆ ಎಂದು ಬಣ್ಣಿಸಲಾದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ)ನ ಬಹುನಿರೀಕ್ಷಿತ ಎರಡನೇ ಹಾಗೂ ಅಂತಿಮ ಕರಡಿನಲ್ಲಿ 40.07 ಲಕ್ಷ ಅರ್ಜಿದಾರರ ಹೆಸರು ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವವರ ಪೈಕಿ ಬಹುತೇಕ ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅವರು ಭಾರತೀಯರಾದರೂ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗಿದೆ ಎಂದು ಐಎಎಂಸಿ ಪ್ರಕಟನೆ ಹೇಳಿದೆ.

"ಇದು ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸುವ ಪ್ರಯತ್ನವಾಗಿದ್ದು, ಧರ್ಮಾಂಧ ಹಾಗೂ ತಾರತಮ್ಯದ ಕಾರ್ಯಸೂಚಿ ಇದರ ಹಿಂದೆ ಇರುವುದು ಭಾರತದ ಮಾಜಿ ರಾಷ್ಟ್ರಪತಿಗಳ ಸಂಬಂಧಿಕರನ್ನು ಕೂಡಾ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮದಿಂದ ಸಾಬೀತಾಗುತ್ತದೆ ಎಂದು ಅಧ್ಯಕ್ಷ ಅಶ್ಹಾನ್ ಖಾನ್ ಕಿಡಿ ಕಾರಿದ್ದಾರೆ. ಕೈಬಿಡಲು ಯಾವ ಮಾನದಂಡವನ್ನು ಅನುಸರಿಸಲಾಗಿದೆ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುವವರೆಗೂ ಈ ಇಡೀ ಯೋಜನೆ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News