ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಸೈನಾ ನೆಹ್ವಾಲ್ ಸವಾಲು ಅಂತ್ಯ

Update: 2018-08-03 06:45 GMT

ನಾನ್‌ಜಿಂಗ್(ಚೀನಾ), ಆ.3: ಭಾರತದ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅವರ ಸವಾಲು ಅಂತ್ಯಗೊಂಡಿದೆ.

ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಅವರು ಸ್ಪೇನ್‌ನ ಕರೊಲಿನ್ ಮರಿನ್ ವಿರುದ್ಧ 6-21, 11-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಎರಡು ಬಾರಿಯ ವಿಶ್ವ ಚಾಂಪಿಯನ್ ಮರಿನ್ 10ನೇ ಶ್ರೇಯಾಂಕದ ಸೈನಾಗೆ ಮರು ಹೋರಾಟಕ್ಕೆ ಅವಕಾಶ ನೀಡದೇ ಕೇವಲ 31 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ಒಲಿಂಪಿಕ್ಸ್ ಚಾಂಪಿಯನ್ ಮರಿನ್ ಶನಿವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಹಿ ಬಿಂಗ್-ಜಿಯಾವೊರನ್ನು ಎದುರಿಸಲಿದ್ದಾರೆ.

ಸೈನಾ 2015 ಹಾಗೂ 2017ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News