ಸೌದಿ: ಭಾರತೀಯನ ಸಾಕ್ಸ್‌ನಿಂದ 1 ಕೋಟಿ ರೂ. ನಗದು ವಶ

Update: 2018-08-03 15:43 GMT

ರಿಯಾದ್, ಆ. 3: ತನ್ನ ಸಾಕ್ಸ್‌ನಲ್ಲಿ 600000 ರಿಯಾಲ್ (1.09 ಕೋಟಿ ರೂಪಾಯಿ) ಹಣವನ್ನು ಅಡಗಿಸಿ ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ವಲಸಿಗನೊಬ್ಬನನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿದ್ದಾರೆ.

ಈ ವ್ಯಕ್ತಿಯು ಸೌದಿಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾಗ ಅಲ್ ದಮ್ಮಾಮ್‌ನಲ್ಲಿರುವ ಕಿಂಗ್ ಫಾಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದರು.

ವಿಮಾನ ನಿಲ್ದಾಣ ಪೊಲೀಸರು ಆತನನ್ನು ವಿಚಾರಣೆಗಾಗಿ ಸುಂಕ ವಿಭಾಗಕ್ಕೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News